ಮಂಗಳೂರು: ಹೊಸ ಮಿನಿ SUV S-Presso ಕಾರು ಮಾರುಕಟ್ಟೆಗೆ

ಮಂಗಳೂರು, ಅ.3: ನಗರದ ಮಾರುತಿ ಸುಝಕಿ ಕಾರುಗಳ ಅಧಿಕೃತ ಮಾರಾಟಗಾರರು, ಸೇವಾದಾರರಾದ ಮಾಂಡೋವಿ ಮೋಟಾರ್ಸ್‌ನ ಹಂಪನಕಟೆಯ ಶೋರೂಂನಲ್ಲಿ ಗುರುವಾರ ಹೊಸ ಮಿನಿ SUV S-Presso ಕಾರನ್ನು ಬ್ಯಾಂಕ್ ಆಫ್ ಬರೋಡಾದ ಉಪ ವಲಯದ ಮುಖ್ಯಸ್ಥ ರಾಮಚಂದರ್ ಮಾರುಕಟ್ಟೆಗೆ ಬಿಡುಗಡೆಗೊಳಿಸಿದರು.
ಚಲನಚಿತ್ರ ನಿರ್ಮಾಪಕ ಮುಕೇಶ್ ಹೆಗ್ಡೆ, ‘ಲುಂಗಿ’ ಕನ್ನಡ ಚಲನಚಿತ್ರದ ನಟ ಪ್ರಣವ್ ಹೆಗ್ಡೆ, ಮಾಂಡೋವಿ ಮೋಟಾರ್ಸ್‌ನ ನಿರ್ದೇಶಕ ಆರೂರು ಸಂಜಯ್ ರಾವ್, ಸರ್ವೀಸ್ ಹಾಗೂ ಸ್ಪೇರ್ಸ್‌ನ ಮುಖ್ಯ ಪ್ರಧಾನ ವ್ಯವಸ್ಥಾಪಕ ನೆರೆಂಕಿ ಪಾರ್ಶ್ವನಾಥ್, ಸೇಲ್ಸ್ ಹಾಗೂ ಮಾರ್ಕೆಟಿಂಗ್ ವಿಭಾಗದ ಉಪ ಪ್ರಧಾನ ವ್ಯವಸ್ಥಾಪಕ ಶಶಿಧರ್ ಕಾರಂತ್, ಹಿರಿಯ ಸೇಲ್ಸ್ ಮ್ಯಾನೇಜರ್ ಕಿಶನ್ ಶೆಟ್ಟಿ ಮತ್ತಿತರು ಉಪಸ್ಥಿತರಿದ್ದರು.
ಕಾರಿನ ವೈಶಿಷ್ಟತೆ
ಹೊಸ ಕಾರು 5ನೇ ಜೆನರೇಶನ್ ಹಾರ್ಟೆಕ್ ಪ್ಲಾಟ್‌ಫಾರ್ಮ್‌ನಲ್ಲಿ ರೂಪಿಸಲಾಗಿದೆ. ಈ ಕಾರು 1.0 ಲೀ. ಪೆಟ್ರೋಲ್ ಇಂಜಿನ್, 10+ ಸೇಫ್ಟಿ ಫೀಚರ್ಸ್, ಎಬಿಎಸ್ ವಿದ್ ಇಬಿಡಿ, ಡ್ರೈವರ್ ಹಾಗೂ ಕೋ-ಡ್ರೈವರ್ ಏರ್‌ಬ್ಯಾಗ್, ಇಸ್ಪೈರ್ಡ್ ಬೋಲ್ಡ್ ಫ್ರಂಟ್ ಫೇಶಿಯಾ, ಡೈನಾಮಿಕ್ ಸೆಂಟರ್ ಕನ್ಸೋಲ್, ಹೈ ಗ್ರೌಂಡ್ ಕ್ಲಿಯರೆನ್ಸ್, ಟ್ವಿನ್ ಚೇಂಬರ್ ಹೆಡ್ ಲ್ಯಾಂಪ್ಸ್, ಸ್ಕ್ವೇರ್ ವೀಲ್ಹ್ ಆರ್ಚ್ ವಿದ್ 14 ಟಯರ್, ಸಿಗ್ನೇಚರ್ ಸಿ ಶೇಪಡ್ ಟೈಲ್ ಲ್ಯಾಂಪ್ಸ್, ಸೈಡ್ ಬಾಡಿ ಕ್ಲಾಡಿಂಗ್, ಸ್ಮಾರ್ಟ್ ಪ್ಲೇ ಸ್ಟೂಡಿಯೊ, ಸ್ಟೇರಿಂಗ್ ಮೌಂಟೆಡ್ ಕಂಟ್ರೋಲ್, ಎಫರ್ಟ್‌ಲೆಸ್ಸ್ ಎಜಿಎಸ್, ಸ್ಮಾರ್ಟ್ ಪ್ಲೇ ಡಾಕ್, ಸ್ಪೇಶಿಯಸ್ ಕ್ಯಾಬಿನ್ ವಿದ್ ಬೆಸ್ಟ್ ಇನ್ ಇಟ್ಸ್ ಕ್ಲಾಸ್ ರೇರ್ ಲೆಗ್ ರೂಂ, ಹೈ ಸೀಟಿಂಗ್ ಪೊಸಿಶನ್ ವಿದ್ ಗುಡ್ ರೋಡ್ ವ್ಯೆ, ಗುಡ್ ಲಗ್ಗೇಜ್ ವಾಲ್ಯೂಮ್‌ಗಳಂಹ ಅತ್ಯಾಧುನಿಕ ವೈಶಿಷ್ಟಗಳನ್ನೊಳಗೊಂಡಿದೆ. ಕಾರು 21.4ರ ಮೈಲೇಜ್ ನೀಡುತ್ತದೆ. ಈ ಕಾರಿನ ಎಕ್ಸ್ ಶೋರೂಂ ಬೆಲೆ 3.69 ಲಕ್ಷ ರೂ.ನಿಂದ ಆರಂಭವಾಗುತ್ತದೆ.
ಬೃಹತ್ ಡೀಲರ್ ಸಂಸ್ಥೆ: ಮಾಂಡೋವಿ ಮೋಟಾರ್ಸ್ ರಾಜ್ಯದಲ್ಲೇ ಬಹುದೊಡ್ಡ ಮಾರುತಿ ಸುಝಕೀ ಕಾರುಗಳ ಡೀಲರ್ ಸಂಸ್ಥೆಯಾಗಿದೆ. ರಾಜ್ಯದ ನಾಲ್ಕು ನಗರಗಳಲ್ಲಿ ಒಂಬತ್ತು ಶೋರೂಂ, ಒಂಬತ್ತು ಇ-ಔಟ್‌ಲೆಟ್ಸ್, ನಾಲ್ಕು ಆರ್-ಔಟ್‌ಲೆಟ್ಸ್, 28 ವರ್ಕ್‌ಶಾಪ್ಸ್, ಐದು ಟ್ರೂ-ವ್ಯಾಲ್ಯೂ ಶೋರೂಂ ಹಾಗೂ ಆರು ಮಾರುತಿ ಡ್ರೈವಿಂಗ್ ಸ್ಕೂಲ್‌ಗಳನ್ನು ಹೊಂದಿದೆ. 2,800ಕ್ಕೂ ಹೆಚ್ಚು ನುರಿತ ಸಿಬ್ಬಂದಿ ಒಳಗೊಂಡಿದೆ.
ಗ್ರಾಹಕರು ಮಾರುತಿ ಕಾರುಗಳ ಬಗ್ಗೆ ಹೆಚ್ಚಿನ ಮಾಹಿತಿ ಹಾಗೂ ಟೆಸ್ಟ್‌ಡ್ರೈವ್‌ಗಾಗಿ ನಗರದ ಬಲ್ಮಠ ರಸ್ತೆಯಲ್ಲಿರುವ ಮಾಂಡೋವಿ ಮೋಟಾರ್ಸ್‌ನ್ನು ಸಂಪರ್ಕಿಸಬಹುದಾಗಿದೆ.







