2ನೇ ವಿಶ್ವಯುದ್ಧ ಕಾಲದ ಯುದ್ಧವಿಮಾನ ಪತನ: 7 ಸಾವು
ನ್ಯೂಯಾರ್ಕ್, ಅ. 3: ಹದಿಮೂರು ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ಎರಡನೇ ಮಹಾಯುದ್ಧ ಕಾಲದ ಬಾಂಬರ್ ವಿಮಾನವೊಂದು ಅಮೆರಿಕದ ಕನೆಕ್ಟಿಕಟ್ ರಾಜ್ಯದಲ್ಲಿ ಬುಧವಾರ ಪತನಗೊಂಡಿದೆ ಹಾಗೂ ಕನಿಷ್ಠ 7 ಮಂದಿ ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಬೋಯಿಂಗ್ ಬಿ-17 ವಿಮಾನವನ್ನು ಅಮೆರಿಕ ವಾಯುಪಡೆಯು ಜರ್ಮನಿ ಮತ್ತು ಜಪಾನ್ಗಳ ವಿರುದ್ಧ ಬಳಸಿತ್ತು.
ಬುಧವಾರ ಬೆಳಗ್ಗೆ 10 ಗಂಟೆಗೆ ಬ್ರಾಡ್ಲೇ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯಲು ಪ್ರಯತ್ನಿಸುತ್ತಿದ್ದಾಗ ವಿಮಾನ ಪತನಗೊಂಡಿತು.
ವಿಮಾನದಲ್ಲಿ 10 ಪ್ರಯಾಣಿಕರು ಮತ್ತು ಮೂವರು ಸಿಬ್ಬಂದಿ ಇದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.
ಈ ವಿಮಾನವನ್ನು ಕಾಲಿಂಗ್ಸ್ ಫೌಂಡೇಶನ್ ಎಂಬ ಸಂಸ್ಥೆಯು ಹಳೆಯ ಕಾಲದ ವಿಮಾನಗಳಲ್ಲಿ ಹಾರಾಟ ನಡೆಸಲು ಬಯಸುವವರಿಗಾಗಿ ನಡೆಸುತ್ತಿತ್ತು.
Next Story