ಮದನಿ ಕಾಲೇಜು ಎನ್ನೆಸ್ಸೆಸ್ ವಿದ್ಯಾರ್ಥಿಗಳಿಂದ ಶಿಬಿರ

ಉಳ್ಳಾಲ, ಅ.3: ಶಿಸ್ತು ಜೀವನದ ಪ್ರಮುಖ ಅಂಗವಾಗಿದೆ. ವಿದ್ಯಾರ್ಥಿ ಜೀವನದಲ್ಲಿ ಎನ್ನೆಸ್ಸೆಸ್ ಶಿಬಿರದ ಮೂಲಕ ಶಿಸ್ತು ಬದ್ಧ ಜೀವನ ನಡೆಸಲು ಸಹಕಾರಿ ಎಂದು ಶಾಸಕ ಯು.ಟಿ. ಖಾದರ್ ಅಭಿಪ್ರಾಯಪಟ್ಟರು.
ಉಳ್ಳಾಲ ಮದನಿ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯಿಂದ 6 ದಿನಗಳ ಕಾಲ ಮೊಂಟೆಪದವು ಕರ್ನಾಟಕ ಪಬ್ಲಿಕ್ ಸ್ಕೂಲ್ನಲ್ಲಿ ನಡೆಯುವ 2019-20ನೇ ಸಾಲಿನ ವಾರ್ಷಿಕ ವಿಶೇಷ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಎನ್ನೆಸ್ಸೆಸ್ ಶಿಬಿರವು ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದುದಲ್ಲದೆ ಪ್ರಸಕ್ತ ದಿನಕ್ಕೆ ಅಗತ್ಯವಾದ ಸಹೋದರತೆ ಮತ್ತು ಎಲ್ಲರೂ ಒಂದಾಗಿ ಕಲೆತು ಬೆರೆಯುವ ಬದುಕಿನ ಕಲೆಯನ್ನೂ ಕಲಿಸಿಕೊಡುತ್ತದೆ ಎಂದು ಖಾದರ್ ಹೇಳಿದರು.
ಮೊಂಟೆಪದವು ಪದವಿ ಪೂರ್ವ ಕಾಲೇಜಿನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಅಬ್ದುಲ್ ಜಲೀಲ್ ಮೋಂಟುಗೋಳಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ದಲಿತ ಮುಖಂಡ ಪದ್ಮನಾಭ ನರಿಂಗಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲ ಇಸ್ಮಾಯಿಲ್ ಟಿ., ಪ್ರೌಢ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಮುರಳೀಧರ ಶೆಟ್ಟಿ ಮೋರ್ಲ, ಮೊಂಟೆಪದವು ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ವನಿತಾ ದೇವಾಡಿಗ, ಉಪ ಪ್ರಾಂಶುಪಾಲ ಸಂತೋಷ್ ಕುಮಾರ್ ಟಿ.ಎನ್, ನರಿಂಗಾನ ಗ್ರಾಪಂ ಸದಸ್ಯ ಅಬ್ದುಲ್ ರಹ್ಮಾನ್ ಚಂದಹಿತ್ಲು ಉಪಸ್ಥಿತರಿದರು.
ಎನ್ನೆಸ್ಸೆಸ್ ಅಧಿಕಾರಿ ಹಬೀಬ್ ರಹ್ಮಾನ್ ಸ್ವಾಗತಿಸಿದರು. ಉಪನ್ಯಾಸಕ ಎಎಂ ಅಬ್ದುಲ್ ಅಝೀಝ್ ವಂದಿಸಿದರು. ಶಿಬಿರ ನಾಯಕ ಮುಹಮ್ಮದ್ ತಂಝಿಲ್ ಕಾರ್ಯಕಮ ನಿರೂಪಿಸಿದರು.







