ವಿಟ್ಲ ಭಾಗದಲ್ಲಿ ಮತ್ತೆ ಸರಣಿ ಕಳ್ಳತನ

ವಿಟ್ಲ, ಅ. 3: ವಿಟ್ಲ ಭಾಗದಲ್ಲಿ ಮತ್ತೆ ಸರಣಿ ಕಳ್ಳತನ ಪ್ರಕರಣ ನಡೆದಿದೆ. ಅಂಗಡಿಗಳಿಗೆ ನುಗ್ಗಿದ ಕಳ್ಳರು ನಗದು ದೋಚಿ ಪರಾರಿಯಾದ ಘಟನೆ ಒಕ್ಕೆತ್ತೂರು ಎಂಬಲ್ಲಿ ಗುರುವಾರ ಸಂಭವಿಸಿದೆ.
ಒಕ್ಕೆತ್ತೂರು ಎಂಬಲ್ಲಿರುವ ಮುಹಮ್ಮದ್ ಎಂಬವರಿಗೆ ಸೇರಿದ ಗೂಡಾಂಗಡಿಯ ಬೀಗ ಮುರಿದು ಸಿಗೇರೆಟ್ ಹಾಗೂ ಚಿಲ್ಲರೆ ಹಣ ಕಳವು ಗೈಯ್ಯಲಾಗಿದೆ. ಅದರ ಪಕ್ಕದಲ್ಲಿರುವ ಬಶೀರ್ ಎಂಬವರ ಅಂಗಡಿಗೂ ನುಗ್ಗಿದ ಕಳ್ಳರು ಅಲ್ಲಿಂದಲೂ ನಗದು ದೋಚಿದ್ದಾರೆ. ಇನ್ನೂ ಅಳಕೆ ಮಜಲು ಎಂಬಲ್ಲಿಯ ಅಂಗಡಿಯಿಂದ ಕಳವುಗೈಯ್ಯಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ವಿಟ್ಲ ಮಂಗಳಪದವು ಮುಡಿಬಾರ್‍ನಲ್ಲಿ ಬಾಡಿಗೆ ಮನೆಯಲ್ಲಿ ವಾಸ ಇರುವ ಸಲೀಂ ಸೇರಾಜೆ ಅವರ ಮನೆಯಲ್ಲಿ ಯಾರೂ ಇಲ್ಲದ ವೇಳೆ ಒಳ ನುಗ್ಗಿದ ಕಳ್ಳರು, ಕಳವಿಗೆ ವಿಫಲ ಯತ್ನ ನಡೆಸಿದ್ದಾರೆ ಎಂದು ದೂರಲಾಗಿದೆ.
ಈ ಸಂಬಂಧ ವಿಟ್ಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
Next Story





