ರಾಜ್ಯಸಭೆ: ಬಿಜೆಪಿ ಅಭ್ಯರ್ಥಿಗಳಾಗಿ ಸುಧಾಂಶು ತ್ರಿವೇದಿ, ಸತೀಶ್ ದುಬೆ ಆಯ್ಕೆ

ಹೊಸದಿಲ್ಲಿ, ಅ.3: ರಾಜ್ಯಸಭೆ ಚುನಾವಣೆಗೆ ಬಿಜೆಪಿಯ ಅಭ್ಯರ್ಥಿಗಳಾಗಿ ಪಕ್ಷದ ವಕ್ತಾರ ಸುಧಾಂಶು ತ್ರಿವೇದಿ ಹಾಗೂ ಮಾಜಿ ಸಂಸದ ಸತೀಶ್ ದುಬೆಯನ್ನು ಆಯ್ಕೆ ಮಾಡಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಉತ್ತರಪ್ರದೇಶದಿಂದ ತ್ರಿವೇದಿ ಹಾಗೂ ಬಿಹಾರದಿಂದ ದುಬೆ ಕಣಕ್ಕಿಳಿಯಲಿದ್ದಾರೆ. ಉತ್ತರಪ್ರದೇಶದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದ ಬಿಜೆಪಿ ಮುಖಂಡ ಅರುಣ್ ಜೇಟ್ಲಿ ಹಾಗೂ ಬಿಹಾರದಿಂದ ಆಯ್ಕೆಯಾಗಿದ್ದ ಆರ್‌ಜೆಡಿ ಮುಖಂಡ ರಾಮ್ ಜೇಠ್ಮಲಾನಿ ನಿಧನದಿಂದ ತೆರವಾಗಿರುವ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಜೆಡಿಯು ಮತ್ತು ಎಲ್‌ಜೆಪಿ ಪಕ್ಷಗಳ ಜೊತೆ ಮೈತ್ರಿಮಾಡಿಕೊಂಡಿರುವ ಬಿಜೆಪಿ ಈ ಎರಡೂ ಸ್ಥಾನಗಳಲ್ಲಿ ಗೆಲ್ಲುವ ವಿಶ್ವಾಸದಲ್ಲಿದೆ.
Next Story





