ಪಿಂಚಣಿದಾರರಿಗೆ ಸೂಚನೆ
ಉಡುಪಿ, ಅ.4: 80ವರ್ಷಕ್ಕಿಂತ ಹೆಚ್ಚು ಪ್ರಾಯದ ಪಿಂಚಣಿದಾರರು ಅಕ್ಟೋಬರ್ ತಿಂಗಳ ಪ್ರಾರಂಭದಿಂದಲೇ ಜೀವಂತ ಪ್ರಮಾಣಪತ್ರ ಸಲ್ಲಿಸ ಬಹುದು. ನವಂಬರ್ ತಿಂಗಳ ತನಕ ಕಾಯಬೇಕಾಗಿಲ್ಲ. ಸಲ್ಲಿಸಿದ ಪ್ರಮಾಣ ಪತ್ರ ಮುಂದಿನ ವರ್ಷದ ನವಂಬರ್ ತಿಂಗಳ ತನಕ ಮಾನ್ಯವಿರುತ್ತದೆ ಎಂದು ಕೇಂದ್ರ ಸರಕಾರದ ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಇದು ಅನ್ವಯವಾಗುವ ನಿವೃತ್ತ ವೇತನದಾರರು ತಮಗೆ ನಿವೃತ್ತಿ ವೇತನ ಬಟವಾಡೆ ಮಾಡುವ ಬ್ಯಾಂಕಿನಲ್ಲಿ ಅಥವಾ ಅದೇ ಬ್ಯಾಂಕಿನ ಯಾವುದಾರು ಶಾಖೆಯ ಮೂಲಕ ಜೀವಂತ ಪ್ರಮಾಣ ಪತ್ರ ಸಲ್ಲಿಸಬಹುದು. ಅನಾರೋಗ್ಯದ ಕಾರಣ ಬ್ಯಾಂಕಿಗೆ ಬರಲು ಸಾಧ್ಯವೇ ಇಲ್ಲದವರು ಬ್ಯಾಂಕಿನವರು ತಮ್ಮಲ್ಲಿಗೆ ಬಂದು ಪ್ರಮಾಣ ಪತ್ರ ಸ್ವೀಕರಿಸುವಂತೆ ಬ್ಯಾಂಕಿನ ಪ್ರಬಂಧಕರನ್ನು ಕೇಳಿಕೊಳ್ಳಬಹುದು ಎಂದು ಕರ್ನಾಟಕ ರಾಜ್ಯ ಸರಕಾರಿ ನಿವೃತ್ತ ನೌಕರರ ಉಡುಪಿ ಜಿಲ್ಲಾ ಸಂಘದ ಕಾರ್ಯದರ್ಶಿ ಎಸ್. ಎಸ್. ತೋನ್ಸೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story





