ಅ.6: ಕೃತಿ ಲೋಕಾರ್ಪಣೆ
ಉಡುಪಿ, ಅ.4: ಡಾ.ಗಂಗಾಧರ ರಾವ್ ರಚಿಸಿದ ‘ದೇವರು ಮತ್ತು ವಿಶ್ವ’ ಕೃತಿಯ ಲೋಕಾರ್ಪಣಾ ಸಮಾರಂಭ ಅ.6ರ ರವಿವಾರ ಬೆಳಗ್ಗೆ 11:00 ಗಂಟೆಗೆ ಕುಂಜಿಬೆಟ್ಟು ಶಾರದಾ ನಗದ ಜ್ಞಾನಮಂದಿರದಲ್ಲಿ ನಡೆಯಲಿದೆ.
ಉಡುಪಿ ಹಿರಿಯ ನಾಗರಿಕರ ಸಂಘದ ಅಧ್ಯಕ್ಷ ಸಿ.ಎಸ್.ರಾವ್ ಅಧ್ಯಕ್ಷತೆ ವಹಿಸಲಿದ್ದು, ಮುಕ್ಕದ ಶ್ರೀನಿವಾಸ ವಿವಿಯ ಯುನಿವರ್ಸಿಟಿ ಕಾಲೇಜ್ ಆಫ್ ಇಂಜಿನಿಯರಿಂಗ್‌ನ ಪ್ರಾಂಶುಪಾಲರಾದ ಡಾ.ಥಾಮಸ್ ಪಿಂಟೋ ಕೃತಿಯನ್ನು ಬಿಡುಗಡೆ ಗೊಳಿಸಲಿದ್ದಾರೆ. ಕೃತಿ ಪರಿಚಯವನ್ನು ಮಂಗಳೂರಿನ ಡಾ.ರಾಮಕೃಷ್ಣ ಹೆಗಡೆ ಮಾಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
Next Story





