ಕ್ಯೂಎಸ್ ವಿಶ್ವ ರ್ಯಾಂಕಿಂಗ್: ಟ್ಯಾಪ್ಮಿಗೆ 101+ರಲ್ಲಿ ಸ್ಥಾನ
ಮಣಿಪಾಲ, ಅ.4: ದೇಶದ ಪ್ರಮುಖ ಬಿ-ಸ್ಕೂಲ್‌ಗಳಲ್ಲಿ ಒಂದಾದ ಮಣಿಪಾಲದ ಟಿ.ಎ.ಪೈ ಮ್ಯಾನೇಜ್‌ಮೆಂಟ್ ಇನ್‌ಸ್ಟಿಟ್ಯೂಟ್ (ಟ್ಯಾಪ್ಮಿ), ಮ್ಯಾನೇಜ್‌ಮೆಂಟ್ ಸ್ಕೂಲ್‌ಗಳಿರುವ ವಿಶ್ವದ ಪ್ರತಿಷ್ಠಿತ ಕ್ಯೂಎಸ್ ವಿಶ್ವ ರ್ಯಾಂಕಿಂಗ್‌ನಲ್ಲಿ ಮೊದಲ ಬಾರಿ ಸ್ಥಾನ ಪಡೆದಿದೆ. ಭಾರತದ ಐಐಎಂ ಇಂದೋರ್ ಹಾಗ ಐಐಎಂ ಉದಯಪುರಗಳೊಂದಿಗೆ ಅದು 101+ ವಿಭಾಗದಲ್ಲಿ ಸ್ಥಾನ ಪಡೆದಿದೆ ಎಂದು ಟ್ಯಾಪ್ಮಿಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ವಿಶ್ವದ ಅಗ್ರಗಣ್ಯ 100 ಬಿ-ಸ್ಕೂಲ್‌ಗಳಲ್ಲಿ ಭಾರತದ ಮೂರು ಸಂಸ್ಥೆಗಳು ಸ್ಥಾನ ಪಡೆದಿವೆ. ಐಐಎಂ ಬೆಂಗಳೂರು 26ನೇ, ಐಐಎಂ ಅಹಮ್ಮದಾಬಾದ್ 27ನೇ ಹಾಗೂ ಐಐಎಂ ಕೊಲ್ಕತ್ತಾ 46ನೇ ರ್ಯಾಂಕ್ ಪಡೆದಿವೆ.
ಮೊದಲ ಬಾರಿ ಪ್ರತಿಷ್ಠಿತ ಕ್ಯೂಎಸ್ ರ್ಯಾಂಕಿಂಗ್‌ನಲ್ಲಿ ಸ್ಥಾನ ಪಡೆದಿರುವ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ಟ್ಯಾಪ್ಮಿಯ ನಿರ್ದೇಶಕ ಪ್ರೊ.ಮಧು ವೀರರಾಘವನ್, ನಮ್ಮ ಸಂಸ್ಥೆಗೆ ಇದು ಹೆಮ್ಮೆಯ ಕ್ಷಣಗಳಾಗಿವೆ ಎಂದರು.
Next Story





