ವಳಚ್ಚಿಲ್: ಉಚಿತ ಸ್ಕಾಲರ್ ಶಿಪ್ ಅಭಿಯಾನ

ಮಂಗಳೂರು: ಶಂಸುಲ್ ಉಲಮಾ ಕ್ರಿಯಾ ಸಮಿತಿ ವಳಚ್ಚಿಲ್, ಎಸ್ಕೆಎಸ್ಸೆಸ್ಸೆಫ್ ಟ್ರೆಂಡ್ ವಳಚ್ಚಿಲ್ ಯುನಿಟ್, ಎಸ್ಕೆಎಸ್ಸೆಸ್ಸೆಫ್ ಕ್ಯಾಂಪಸ್ ವಿಂಗ್ ವಳಚ್ಚಿಲ್ ಯುನಿಟ್ ವತಿಯಿಂದ ಉಚಿತ ಸ್ಕಾಲರ್ ಶಿಪ್ ಅಭಿಯಾನ ನಡೆಯಿತು.
ವಳಚ್ಚಿಲ್ ಪದವಿನಲ್ಲಿ ನಡೆದ ಕಾರ್ಯಕ್ರಮವನ್ನು ವಳಚ್ಚಿಲ್ ಪದವಿನ ಖತೀಬ್ ಅಬೂಬಕ್ಕರ್ ಸಖಾಫಿ ಉದ್ಘಾಟನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಶಂಸುಲ್ ಉಲಮಾ ಕ್ರಿಯಾ ಸಮಿತಿ ವಳಚ್ಚಿಲ್ ಕಚೇರಿಯಲ್ಲಿ ನಡೆದ ಕಾರ್ಯಕ್ರಮವನ್ನು ವಳಚ್ಚಿಲ್ ತನ್ವೀರುಲ್ ಇಸ್ಲಾಂ ಮದರಸದ ಅಧ್ಯಾಪಕರು ದುವಾ ಮೂಲಕ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಶಂಸುಲ್ ಉಲಮಾ ಕ್ರಿಯಾ ಸಮಿತಿಯ ಅಧ್ಯಕ್ಷ ಸಮೀರ್ ಶಾನ್ ಹಾಗೂ ಪ್ರ.ಕಾರ್ಯದರ್ಶಿ ಅಬ್ದುಲ್ ಮಾಲಿಕ್ ಮತ್ತು ಎಸ್ಕೆಎಸ್ಸೆಸ್ಸೆಫ್ ವಳಚ್ಚಿಲ್ ಶಾಖೆಯ ಅಧ್ಯಕ್ಷ ದಾವೂದ್ ಹಾಗೂ ಪ್ರ.ಕಾರ್ಯದರ್ಶಿ ಹಾರಿಸ್, ವರ್ಕಿಂಗ್ ಕಾರ್ಯದರ್ಶಿ ನಝೀರ್ ವಳಚ್ಚಿಲ್ ಪದವು ಹಾಗೂ ಶಂಸುಲ್ ಉಲಮಾ ಕ್ರಿಯಾ ಸಮಿತಿ ಮತ್ತು ಎಸ್ಕೆಎಸ್ಸೆಸ್ಸೆಫ್ ವಳಚ್ಚಿಲ್ ಶಾಖೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.





