Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಪ್ರವಾಹದಿಂದ ಹಾನಿಯಾದ ಚಾರ್ಮಾಡಿ, ದಿಡುಪೆ...

ಪ್ರವಾಹದಿಂದ ಹಾನಿಯಾದ ಚಾರ್ಮಾಡಿ, ದಿಡುಪೆ ಪರಿಸಕ್ಕೆ ಭೇಟಿ ನೀಡಿದ ದ.ಕ. ಜಿಲ್ಲಾಧಿಕಾರಿ

ವಾರ್ತಾಭಾರತಿವಾರ್ತಾಭಾರತಿ4 Oct 2019 11:08 PM IST
share
ಪ್ರವಾಹದಿಂದ ಹಾನಿಯಾದ ಚಾರ್ಮಾಡಿ, ದಿಡುಪೆ ಪರಿಸಕ್ಕೆ ಭೇಟಿ ನೀಡಿದ ದ.ಕ. ಜಿಲ್ಲಾಧಿಕಾರಿ

ಬೆಳ್ತಂಗಡಿ: ಜಿಲ್ಲೆಯಲ್ಲಿ ಪ್ರವಾಹದಿಂದ ಆಗಿರುವ ಹಾನಿಯ ಬಗೆಗೆ ಸರಕಾರಕ್ಕೆ ವರದಿ ಸಲ್ಲಿಸಲಾಗಿದ್ದು ಮೊದಲ ಹಂತದ ಪರಿಹಾರ ಬಿಡುಗಡೆಯಾಗಿದೆ. ಬರುವ ಅನುದಾನಗಳಿಗೆ ಅನುಸಾರವಾಗಿ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ದ.ಕ ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ತಿಳಿಸಿದರು. 

ಅವರು ಶುಕ್ರವಾರ ಬೆಳ್ತಂಗಡಿ ತಾಲೂಕಿನಲ್ಲಿ ಪ್ರವಾಹದಿಂದಾಗಿ ಅತ್ಯಂತ ಹೆಚ್ಚು ಹಾನಿಗೀಡಾದ ಚಾರ್ಮಾಡಿ ಹಾಗೂ ದಿಡುಪೆ ಪರಿಸಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸಂತ್ರಸ್ಥರ ಸಮಸ್ಯೆಗಳನ್ನು ಆಲಿಸಿದ ಬಳಿ ಮಧ್ಯಮದವರೊಂದಿಗೆ ಮಾತನಾಡಿದರು.

ತಾಲೂಕಿನಲ್ಲಿ ಹಾನಿಗೆ ಒಳಗಾಗಿರುವ ಮನೆಗಳನ್ನು ಗುರುತಿಸಲಾಗಿದ್ದು ನಮನೆ ನಿರ್ಮಾಣಕ್ಕೆ ಮೊದಲ ಹಂತದ ಅನುದಾನವನ್ನು ಬಿಡಿಗಡೆ ಮಾಡಲಾಗಿದೆ. ಮನೆ ಮಂಜೂರಾದವರು ಇನ್ನು ಮನೆ ನಿರ್ಮಾಣದ ಕಾರ್ಯವನ್ನು ಆರಮಭಿಸಬಹುದಾಗಿದೆ. ಮುಂದೆ ಇವರಿಗೆ ರಾಜೀವಗಾಂಧಿ ವಸತಿ ನಿಗಮದಿಂದ ಹಂತಹಂತವಾಗಿ ಅನುದಾನ ಮಝೂರಾಗಲಿದೆ ಎಂದು ತಿಳಿಸಿದರು. ಮನೆಗೆ ನಿವೇಶನವಿಲ್ಲವರ ಪಟ್ಟಿ ಯನ್ನು ತಯಾರಿಸಲಾಗಿದ್ದು ಅಂತವರಿಗೆ ನಿವೇಶನ ನೀಡುವ ಕಾರ್ಯವನ್ನು ಗ್ರಾಮ ಪಂಚಾಯತುಗಳು ನಡೆಸುತ್ತಿದೆ ಎಂದರು. 

ಕೃಷಿ ನಾಶದ ಬಗೆಗೆ ವರದಿಯನ್ನು ತಯಾರಿಸಲಾಗಿದ್ದು ಸರಕಾರಕ್ಕೆ ಸಲ್ಲಿಸಲಾಗಿದೆ. ಅದನ್ನು ಮೂರು ರೀತಿಯಲ್ಲಿ ಗುರುತಿಸಲಾಗಿದೆ ಕೃಷಿಭೂಮಿಗೆ ಮರಳು ತುಂಬಿಕೊಂಡವರಿಗೆ, ಕೃಷಿ ನಾಶವಾಗಿರುವುದನ್ನು ಹಾಗೂ ನದಿಗಳು ಪಾತ್ರ ಬದಲಿಸಿರುವುದರಿಂದ ಆಗಿರುವ ನಾಶ ಗಳನ್ನು ಅಂದಾಜಿಸಲಾಗಿದೆ. ಕೃಷಿ ನಾಶಕ್ಕೆ ಎನ್.ಡಿ.ಆರ್.ಎಫ್ ಮಾದರಿಯಂತೆ ಪರಿಹಾರವನ್ನು ವಿತರಿಸಲಾಗುವುದು ಬೆಳ್ತಂಗಡಿ ತಾಲೂಕಿನಿಂದ ಸುಮಾರು 1200 ಅರ್ಜಿಗಳು ಬಂದಿದೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು. 

ಮರಳು ನೀತಿಯಂತೆಯೇ ಕ್ರಮ: ನದಿಗಳು ಮರಳಿನಿಂದ ತುಂಬಿದ್ದರೂ ಮರಳು ತೆಗೆಯಲು ಇರುವ ಕಾನೂನುಗಳನ್ನು ಅನುಸರಿಸಿಕೊಂಡೇ ಮುಂದುವರಿಯಬೇಕಾಗಿದೆ. ಜಿಲ್ಲೆಯಲ್ಲಿರುವ ಮರಳು ಶೇಖರಣೆಗಳನ್ನು 22 ಕಡೆಗಳಲ್ಲಿ ಗುರುತಿಸಲಾಗಿದ್ದು ಅದರಲ್ಲಿ 12ರ ಟೆಂಡರ್ ಕರೆಯುವ ಕಾರ್ಯ ನಡೆಯುತ್ತಿದೆ, ಇದೀಗ ಪ್ರವಾಹದಿಂದಾಗಿ ಮರಳು ದಿನ್ನೆಗಳು ಸೃಷ್ಟಿಯಾಗಿದ್ದರೆ ಅದನ್ನು ಪರಿಶೀಲಿಸುವ ಕಾರ್ಯವನ್ನು ಮಾಡಲಾಗು ತ್ತಿದೆ ಇದೇ ಪ್ರಕ್ರಿಯೆಗಳ ಮೂಲಕವೇ ಅನ್ನೂ ತೆರವುಗೊಳಿಸಬೇಕಾಗಿದೆ ಎಂದರು.

ಕೃಷಿಭೂಮಿಗಳಲ್ಲಿ ತುಂಬಿರುವ ಮರಳನ್ನು ನೇರವಾಗಿ ತೆಗೆದು ಸಾಗಾಟ ಮಾಡುವಾಗಿಲ್ಲ ಎಂದ ಅವರು ಅದನ್ನು ಸ್ಥಳೀಯವಾಗಿ ಉಪಯೋಗಿ ಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ. ಗ್ರಾಮಪಂಚಾಯತುಗಳ ಮಟ್ಟದಲ್ಲಿ ಈ ಮರಳನ್ನು ತೆಗೆಯಲು ಮಾರ್ಗಸೂಚಿಗಳನ್ನು ತಯಾರಿಸಲಾಗುವುದು ಎಂದರು.

ಜಿಲ್ಲಾಧಿಕಾರಿಯವರು ದಿಡುಪೆಯ ಕುಕ್ಕಾವು ಸೇತುವೆ ಹಾಗೂ ಗಣೇಶ ನಗರಕ್ಕೆ ಭೇಟಿ ನೀಡಿದ ಅವರು ಜನರ ಸಮಸ್ಯೆಗಳನ್ನು ಆಲಿಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಚಾರ್ಮಾಡಿಯ ಹೊಸಮಠ ಹಾಗೂ ಅನಾರು ಪರಿಸರಲ್ಲಿನ ಅನಾಹುತಗಳನ್ನು ವೀಕ್ಷಿಸಿದರು.

ಅವರೊಂದಿಗೆ ಜಿ.ಪಂ ಕಾರ್ಯನಿರ್ವಹಣಾಧಿಕಾರಿ ಡಾ. ಸೆಲ್ವಮಣಿ, ತಹಶೀಲ್ದಾರ್ ಗಣಪತಿ ಶಾಸ್ತ್ರಿ, ಕಂದಾಯ ನಿರೀಕ್ಷಕ ರವಿ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು. ಗ್ರಾ. ಪಂ ಅಬಿವೃದ್ದಿ ಅಧಿಕಾರಿಗಳು ಇದ್ದರು.   

share
ವಾರ್ತಾಭಾರತಿ
ವಾರ್ತಾಭಾರತಿ
Next Story
X