ಹಾಂಕಾಂಗ್ನಲ್ಲಿ ತುರ್ತು ಪರಿಸ್ಥಿತಿ ಜಾರಿ
ಹಾಂಕಾಂಗ್, ಅ. 4: ಹಾಂಕಾಂಗ್ನಲ್ಲಿ ಪ್ರಜಾಪ್ರಭುತ್ವಪರ ಪ್ರತಿಭಟನೆ ನಡೆಸುತ್ತಿರುವವರು ಮುಖ ಕವಚಗಳನ್ನು ಹಾಕಿಕೊಳ್ಳುವುದನ್ನು ನಿಷೇಧಿಸುವುದಕ್ಕಾಗಿ ನಗರದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕ್ಯಾರೀ ಲ್ಯಾಮ್ ಶುಕ್ರವಾರ ವಸಾಹತುಶಾಹಿ ಯುಗದ ತುರ್ತು ಪರಿಸ್ಥಿತಿಯನ್ನು ಜಾರಿಗೆ ತಂದಿದ್ದಾರೆ.
ಆದರೆ, ತಿಂಗಳುಗಳ ಕಾಲದ ಅಶಾಂತಿಯನ್ನು ದಮನಿಸಲು ಜಾರಿಗೆ ತರಲಾದ ಈ ಕ್ರಮದ ವಿರುದ್ಧ ಜನರು ಸಿಡಿದೆದ್ದಿದ್ದು, ತಕ್ಷಣ ಹೊಸ ಪ್ರತಿಭಟನಾ ಮೆರವಣಿಗೆಗಳನ್ನು ನಡೆಸಿದ್ದಾರೆ. ನೂತನ ಕಾನೂನನ್ನು ಉಲ್ಲಂಘಿಸುವುದಾಗಿ ಅವರು ಘೋಷಿಸಿದ್ದಾರೆ.
Next Story