ಕಣ್ಣೂರು ಕೇಂದ್ರ ಜುಮಾ ಮಸೀದಿಗೆ ಐವನ್ ಭೇಟಿ

ಮಂಗಳೂರು, ಅ.5: ಮಂಗಳೂರು ಮನಪಾ ವ್ಯಾಪ್ತಿಯ ಕಣ್ಣೂರು 52ನೇ ವಾರ್ಡಿನ ಕಣ್ಣೂರು ಕೇಂದ್ರ ಜುಮಾ ಮಸೀದಿಗೆ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಭೇಟಿ ನೀಡಿದರು.
ನೇತ್ರಾವತಿ ನದಿ ಬಳಿಯ ಹಳೆಯ ಕೇಂದ್ರ ಜುಮಾ ಮಸೀದಿ ಸಮೀಪ ದೋಣಿ ನಿಲುಗಡೆ ಕಾಮಗಾರಿ ಬಗ್ಗೆ ಇಂಜಿನಿಯರ್ ಜೊತೆ, ಮಸೀದಿಯ ಆಡಳಿತ ಕಮಿಟಿಯ ಸದಸ್ಯರೊಂದಿಗೆ ಹಾಗೂ ಸ್ಥಳೀಯ ಮುಖಂಡರೊಂದಿಗೆ ಚರ್ಚಿಸಿದರು.
ಈ ಸಂದರ್ಭ ಉಮರಬ್ಬ, ಹಬೀಬುಲ್ಲಾ ಕಣ್ಣೂರು, ಐಮೋನು, ಹುಸೈನ್, ಶರೀಫ್ ಪಿ.ಎಫ್., ಶರೀಫ್, ರಫೀಕ್ ಮತ್ತಿತರರು ಉಪಸ್ಥಿತರಿದ್ದರು.
Next Story





