ಪ್ರತ್ಯೇಕ ಪ್ರಕರಣ: ಕೆರೆಗೆ ಬಿದ್ದು ಇಬ್ಬರು ಮೃತ್ಯು
ಕುಂದಾಪುರ, ಅ.5: ದನಗಳಿಗೆ ಹುಲ್ಲು ತರಲು ಇಂದು ಬೆಳಗ್ಗೆ ಚೋಣ ಬೆಟ್ಟು ಕೆರೆಯ ಅಂಚಿನಲ್ಲಿ ನಡೆದು ಹೋಗುತ್ತಿದ್ದ ಕೋಣಿ ಗ್ರಾಮದ ಚೋಣಬೆಟ್ಟು ನಿವಾಸಿ ರಮೇಶ ಪೂಜಾರಿ(57) ಎಂಬವರು ಆಕಸ್ಮಿಕವಾಗಿ ಕಾಲುಜಾರಿ ನೀರಿಗೆ ಬಿದ್ದು ಮೃತಪಟ್ಟಿದ್ದಾರೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಂಕರನಾರಾಯಣ: ಮನೆಯ ಸಮೀಪ ಹೋಯಿಗೆ ಗದ್ದೆ ಎಂಬಲ್ಲಿ ಇಂದು ಬೆಳಗ್ಗೆ ತೆರೆದ ಕೆರೆಗೆ ಅಳವಡಿಸಿದ್ದ ಮೋಟಾರ್ ಪಂಪ್‌ಸೆಟ್ ಚಾಲನೆ ಮಾಡಲು ಹೋಗಿದ್ದ ಹಿಲಿಯಾಣ ಗ್ರಾಮದ ಗೋಪಾಡಿ ನಿವಾಸಿ ರವಿ ಎಚ್.ಎನ್.(33) ಎಂಬವರು ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





