ದನ ಕಳವಿಗೆ ಯತ್ನ ಆರೋಪ : ಇಬ್ಬರ ಬಂಧನ
ಬೈಂದೂರು, ಅ.5: ಶಿರೂರು ಮಾರ್ಕೆಟ್ ಬಳಿ ಅ.5ರಂದು ಬೆಳಗಿನ ಜಾವ 3:45ರ ಸುಮಾರಿಗೆ ದನ ಕಳವಿಗೆ ಯತ್ನಿಸುತ್ತಿದ್ದ ಇಬ್ಬರನ್ನು ಬೈಂದೂರು ಪೊಲೀಸರು ಬಂಧಿಸಿದ್ದಾರೆ.
ಧಾರವಾಡ ಜಿಲ್ಲೆಯ ಮೊಹಮ್ಮದ್ ಆಸೀಫ್(24) ಹಾಗೂ ಅಬ್ದುಲ್ ರೆಹಮಾನ್ ಮುನ್ನ(29) ಬಂಧಿತ ಆರೋಪಿಗಳು. ಇವರಿಂದ ಕೃತ್ಯಕ್ಕೆ ಬಳಸಿದ ಟಾಟಾ ಟರ್ಬೋ ವಾಹನ ಮತ್ತು 88,200ರೂ. ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





