ರಂಗಭೂಮಿ ಕ್ಷೇತ್ರದಲ್ಲಿ ಸಾಹಿತ್ಯದ ಸಂಪರ್ಕ ಹೆಚ್ಚು: ರತಾ್ನ ಪಾಠಕ್ ಶಾ

ಮಣಿಪಾಲ, ಅ.6: ಇಂದು ಅಭಿನಯ ತರಬೇತಿ ಕೇಂದ್ರವನ್ನು ನಿರ್ವಹಿಸು ವುದು ಬಹಳ ಕಷ್ಟ. ಆದುದರಿಂದ ಮಹಿಳೆಯರು ಮುಂಬೈಯಲ್ಲಿರುವ ಅಭಿನಯ ತರಬೇತಿಗೆ ಹೋಗುವಾಗ ಬಹಳಷ್ಟು ಯೋಚನೆ ಮಾಡಬೇಕಾಗು ತ್ತದೆ ಎಂದು ರಂಗಭೂಮಿ ಕಲಾವಿದೆ ಹಾಗೂ ಹಿರಿಯ ಚಲನ ಚಿತ್ರ ನಟಿ, ನಿರ್ದೇಶಕಿ ರತ್ನಾ ಪಾಠಕ್ ಶಾ ಹೇಳಿದ್ದಾರೆ.
ಮಣಿಪಾಲದ ಫಯರ್‌ಸೈಡ್ ಚಾಟ್ ವಿದ್ಯಾರ್ಥಿಗಳ ಸಂಘಟನೆಯ ವತಿಯಿಂದ ರವಿವಾರ ಮಣಿಪಾಲ ವ್ಯಾಲಿ ವ್ಯೆ ಹೊಟೇಲ್‌ನ ಸಭಾಂಗಣದಲ್ಲಿ ಆಯೋಜಿಸಲಾದ ಸಂವಾದ ಕಾರ್ಯಕ್ರವುದಲ್ಲಿ ಅವರು ಮಾತನಾಡುತಿದ್ದರು.
ರಂಗಭೂಮಿ ಹಿನ್ನೆಲೆಯ ಕುಟುಂಬದಿಂದ ಬಂದ ನನ್ನ, ತಾಯಿ ಮತ್ತು ಸಹೋದರಿಯರು ರಂಗ ಚಟುವಟಿಕೆಗಳಲ್ಲಿಯೇ ತೊಡಗಿಸಿಕೊಂಡವರು. ರಂಗಭೂಮಿ ಚಟುವಟಿಕೆಗಳಿಂದ ಸಾಹಿತ್ಯದ ಸಂಪರ್ಕ ಹೆಚ್ಚಾಗಿ ಸಿಗುತ್ತದೆ. ಆದರೆ ಚಲನಚಿತ್ರದಲ್ಲಿ ಸಾಹಿತ್ಯದ ಸಂಪರ್ಕ ತೀರಾ ಕಡಿಮೆ ಯಾಗಿರುತ್ತೆ ಎಂದು ಅವರು ಅಭಿಪ್ರಾಯ ಪಟ್ಟರು.
ಚಲನಚಿತ್ರ ಅಥವಾ ರಂಗಭೂಮಿ ಕ್ಷೇತ್ರಗಳಲ್ಲಿ ನಾವು ತಂಡ ಸ್ಫೂರ್ತಿಯಲ್ಲಿ ಕೆಲಸ ಮಾಡಬೇಕು. ಹೊಸ ರೀತಿಯಲ್ಲಿ ಚಿಂತನೆ ಮಾಡಬೇಕು. ಆ ಮೂಲಕ ನಮ್ಮ ಕಲ್ಪನೆಗಳನ್ನು ಸಾಕಾರಗೊಳಿಸಬೇಕು. ಯಾವುದೇ ನಿರ್ಣಯ ತೆಗೆದುಕೊಳ್ಳು ವಾಗ ಕನಸು ಕಾಣಬೇಕಾದ ಅಗತ್ಯ ಇಲ್ಲ ಎಂದು ಅವರು ತಿಳಿಸಿದರು.
ಸಂವಾದ ಕಾರ್ಯಕ್ರಮವನ್ನು ಅನನ್ಯ ರಾವ್ ನಡೆಸಿಕೊಟ್ಟರು. ಐಎಂ ಎಫ್‌ಎಸ್ ಸೆಂಟರ್‌ನ ಮುಖ್ಯಸ್ಥೆ ಶರ್ಮಿಳಾ ಸಾಲಿಗ್ರಾಮ, ತಿಂಕ್ ಟ್ಯಾಂಕ್ ಬೋಧಕ ಸಲಹೆಗಾರ ಅನೀಶ ಆಚಾರ್ಯ ಉಪಸ್ಥಿತರಿದ್ದರು.







