ಯುಎಇ ‘ಪ್ರತಿಭೋತ್ಸವ-2020’ದ ಲಾಂಛನ ಬಿಡುಗಡೆ
ಉಡುಪಿ, ಅ.6: ಕರ್ನಾಟಕ ಕಲ್ಚರಲ್ ಫೌಂಡೇಶನ್ ಯುಎಇ ರಾಷ್ಟ್ರೀಯ ಸಮಿತಿಯ ವತಿಯಿಂದ ಅರಿವಿನ ಕ್ರಾಂತಿಗೆ ಪ್ರತಿಭೆಗಳ ನಡಿಗೆ ಎಂಬ ಶಿರ್ಷಿಕೆ ಯಡಿಯಲ್ಲಿ ಹಮ್ಮಿಕೊಳ್ಳಲಾಗಿರುವ ಪ್ರತಿಭೆಗಳ ಸಾಂಸ್ಕೃತಿಕ ಹಬ್ಬ ‘ಪ್ರತಿಭೋತ್ಸವ -2020’ ಇದರ ಲಾಂಛನವನ್ನು ಸಯ್ಯದ್ ಫಝಲ್ ಕೋಯಮ್ಮ ತಂಙಳ್ ಕೂರತ್ ಇತ್ತೀಚೆಗೆ ಬಿಡುಗಡೆಗೊಳಿಸಿದರು.
ವಿವಿಧ ಎಮಿರೇಟ್ ಗಳಲ್ಲಿ ನವೆಂಬರ್ ತಿಂಗಳಿನಲ್ಲಿ ಈ ಸ್ಪರ್ಧೆ ನಡೆಯಲಿದ್ದು, ಇದರಲ್ಲಿ ವಿಜೇತ ಸ್ಪರ್ಧಾರ್ಥಿಗಳ ಗ್ರಾಂಡ್ ಫೈನಲ್ ಕಾರ್ಯಕ್ರಮವು 2020ರ ಜ.3ರಂದು ಅಬುಧಾಬಿಯ ಸುಸಜ್ಜಿತ ಸಭಾಂಗಣಧಲ್ಲಿ ಜರಗಲಿದೆ. 50ಕ್ಕೂ ಅಧಿಕ ವಿವಿಧ ಸ್ಪರ್ಧಾ ವಿಷಯಗಳಲ್ಲಿ 1000ಕ್ಕೂ ಅಧಿಕ ಪ್ರತಿಭೆಗಳು ಸ್ಪರ್ಧಿಸಲಿರುವರು.
ಪ್ರತಿ ಎಮಿರೇಟ್ಸ್ ನಲ್ಲಿ ಕೆಸಿಎಫ್ ಝೋನಲ್ ಮಟ್ಟದ ಸ್ಪರ್ಧೆಗೆ ಈಗಾಗಲೇ ನೋಂದಾವಣಿ ಆರಂಭವಾಗಿದೆ. ಸಬ್ ಜೂನಿಯರ್, ಜೂನಿಯರ್, ಸೀನಿಯರ್ ಬಾಯ್ಸ್, ಸೀನಿಯರ್ ಗರ್ಲ್ಸ್, ಜನರಲ್ ಮೇಲ್, ಜನರಲ್ ಫೀಮೇಲ್ ವಿಭಾಗಗಳಲ್ಲಿ ಕಿರಾತ್, ಹಾಡು, ಭಾಷಣ, ರಸ ಪ್ರಶ್ನೆ, ಮೆಮೊರಿ ಟೆಸ್ಟ್, ಕಸದಿಂದ ರಸ, ಚರಿತ್ರೆ ಬರಹ, ಅರೇಬಿಕ್ ಕ್ಯಾಲಿಗ್ರಫಿ, ಬುರ್ದಾ, ದಫ್, ಪ್ರಬಂಧ ಇತ್ಯಾಧಿ ಸ್ಪರ್ಧೆಗಳು ನಡೆಯಲಿವೆ. ಯುಎಇಯಾದ್ಯಂತ ನೆಲೆಸಿರುವ ಕನ್ನಡಿಗರು ಇದರಲ್ಲಿ ಭಾಗವಹಿಸಬಹುದು ಎಂದು ಸಂಘಟಕರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಪ್ರತಿಭೋತ್ಸವ ಸಮಿತಿ ಸಂಚಾಲಕ ಬ್ರೈಟ್ ಮಾರ್ಬಲ್ ಇಬ್ರಾಹಿಂ, ಕನ್ವಿನರ್ ಇಕ್ಬಾಲ್ ಕಾಜೂರ್, ಹಾಜಿ ಶೇಕ್ ಬಾವ, ಪಿ.ಎಂ. ಎಚ್.ಹಮೀದ್, ಹಮೀದ್ ಸಅದಿ, ಹಸೈನಾರ್ ಅಮಾನಿ, ಹಕೀಮ್ ತುರ್ಕಳಿಕೆ ಉಪಸ್ಥಿತರಿದ್ದರು.







