ಸೋಮವಾರ ಮೆಹಬೂಬ ಮುಫ್ತಿ ಭೇಟಿಯಾಗಲಿರುವ ಪಿಡಿಪಿ ಸದಸ್ಯರು
ಶ್ರೀನಗರ, ಅ.6: ಗೃಹಬಂಧನಲ್ಲಿರುವ ಪಿಡಿಪಿ ಅಧ್ಯಕ್ಷೆ ಮೆಹಬೂಬ ಮುಫ್ತಿಯವರನ್ನು ಸೋಮವಾರ ಭೇಟಿಯಾಗಲು ಪಕ್ಷದ ಸದಸ್ಯರಿಗೆ ಜಮ್ಮು ಮತ್ತು ಕಾಶ್ಮೀರದ ಆಡಳಿತ ಅನುಮತಿ ನೀಡಿದೆ ಎಂದು ಮೂಲಗಳು ತಿಳಿಸಿವೆ.
ಜಮ್ಮು ಮತ್ತು ಕಾಶ್ಮೀರದಲ್ಲಿ 370ನೇ ವಿಧಿ ರದ್ದುಗೊಳಿಸಿದ ಬಳಿಕ, ಆಗಸ್ಟ್ 5ರಿಂದ ಮೆಹಬೂಬ ಮುಫ್ತಿ, ಫಾರೂಕ್ ಅಬ್ದುಲ್ಲಾ, ಉಮರ್ ಅಬ್ದುಲ್ಲಾ ಸಹಿತ ಪ್ರಮುಖ ರಾಜಕೀಯ ನಾಯಕರನ್ನು ಗೃಹ ಬಂಧನದಲ್ಲಿರಿಸಲಾಗಿದೆ.
ಈ ಮಧ್ಯೆ, ರವಿವಾರ ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಸದಸ್ಯರ ತಂಡ ಪಕ್ಷದ ಮುಖಂಡರಾದ ಫಾರೂಕ್ ಅಬ್ದುಲ್ಲಾ ಹಾಗೂ ಉಮರ್ ಅಬ್ದುಲ್ಲಾರನ್ನು ಭೇಟಿಯಾಗಲು ಆಡಳಿತ ಅವಕಾಶ ಕಲ್ಪಿಸಿದೆ. ತಾವು ಮುಖಂಡರ ಆರೋಗ್ಯ ವಿಚಾರಿಸಲು ಬಂದಿದ್ದು ಯಾವುದೇ ರಾಕಿಐ ವಿಷಯ ಚರ್ಚಿಸಿಲ್ಲ ಎಂದು ಭೇಟಿಯ ಬಳಿಕ ಸದಸ್ಯರ ತಂಡ ಸುದ್ದಿಗಾರರಿಗೆ ತಿಳಿಸಿದೆ.
Next Story