ಕಂಬಳ ಪಟ್ಟಿ ಶೀಘ್ರ ಅಂತಿಮ: ಸಮಿತಿ ಅಧ್ಯಕ್ಷ ಪಿ.ಆರ್ ಶೆಟ್ಟಿ
ಜಿಲ್ಲಾ ಕಂಬಳ ಸಮಿತಿ ಮಹಾಸಭೆ
ಮೂಡುಬಿದಿರೆ: ನ.23ರಿಂದ ಮಾರ್ಚ್ ಮೂರನೇ ವಾರದ ತನಕ ಒಟ್ಟು 20 ಕಂಬಳಗಳನ್ನು 2019-20ನೇ ಸಾಲಿನಲ್ಲಿ ನಡೆಸಲಾಗುವುದು. ವೇಳಾಪಟ್ಟಿಯನ್ನು ಸಿದ್ಧಪಡಿಸಲಾಗುತ್ತಿದ್ದು, ಶೀಘ್ರದಲ್ಲೇ ಅಂತಿಮಗೊಳಿಸಲಾಗುವುದು ಎಂದು ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಪಿ.ಆರ್ ಶೆಟ್ಟಿ ತಿಳಿಸಿದರು.
ಮೂಡುಬಿದಿರೆ ಸಮಾಜಮಂದಿರದಲ್ಲಿ ಭಾನುವಾರ ನಡೆದ ಜಿಲ್ಲಾ ಕಂಬಳ ಸಮಿತಿಯ ಮಹಾಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ಕಂಬಳ ಪ್ರಾರಂಭವಾಗಿ 24 ಗಂಟೆ ಒಳಗಡೆ ಮುಗಿಸುವುದು. ಕಾನೂನು ಪಾಲನೆ ಹೆಚ್ಚಿನ ಒತ್ತು ನೀಡಿ ಕಂಬಳ ಆಯೋಜಿಸುವುದು. ಕೋಣದ ಓಟಗಾರರಿಗೆ ಮತ್ತು ತರಬೇತುದಾರರಿಗೆ ನಿಯಮಗಳನ್ನು ಅಳವಡಿಸಿಕೊಂಡು ಶಿಸ್ತುಬದ್ಧವಾಗಿ ಕಂಬಳ ನಡೆಸುವ ಕುರಿತು ಚರ್ಚೆ ನಡೆಯಿತು.
ಗೌರವಾಧ್ಯಕ್ಷ ಶಾಂತರಾಮ ಶೆಟ್ಟಿ ಬಾರ್ಕೂರು, ಸಾಂಪ್ರದಾಯಿಕ ಕಂಬಳದ ವೆಂಕಟ ಪೂಜಾರಿ, ಉಪಾಧ್ಯಕ್ಷರಾದ ದಿನೇಶ್ ಶೆಟ್ಟಿ ಮಾಳ, ಚಂದ್ರಹಾಸ ಸಾಧು ಸನಿಲ್, ನಿಕಟಪೂರ್ವ ಪ್ರಧಾನ ಕಾರ್ಯದರ್ಶಿ ವಿಜಯ ಕುಮಾರ್ ಕಂಗಿನಮನೆ ಉಪಸ್ಥಿತರಿದ್ದರು.
ಕೊಳಚೂರು ಕೊಂಡೊಟ್ಟು ಸುಕುಮಾರ್ ಶೆಟ್ಟಿ, ವಾಮಂಜೂರು ತಿರುವೈಲ್‍ಗುತ್ತು ನವೀನ್ ಚಂದ್ರ ಆಳ್ವ, ಪುತ್ತೂರು ಕಂಬಳ ಸಮಿತಿ ಚಂದ್ರಹಾಸ ಶೆಟ್ಟಿ, ಅನಿಲ್ ಶೆಟ್ಟಿ ಮಂಕುತೋಟಗುತ್ತು, ನಂದಳಿಕೆ ಶ್ರೀಕಾಂತ್ ಭಟ್, ಮುಚ್ಚೂರು ಲೋಕೇಶ್ ಶೆಟ್ಟಿ, ರಶ್ಮಿತ್ ಶೆಟ್ಟಿ,
ತೀರ್ಪುಗಾರರ ಸಂಚಾಲಕ ಸುಧಾಕರ ಶೆಟ್ಟಿ, ತೀರ್ಪುಗಾರರಾದ ವಿದ್ಯಾಧರ ಜೈನ್, ಸಿದ್ಧಕಟ್ಟೆ ಕರ್ಪೆ ಜನಾರ್ದನ ನಾಯ್ಕ್, ಅಪ್ಪು ಯಾನೆ ವಲೇರಿಯನ್ ಡೇಸ, ಸುಧೀಶ್ ಆರಿಗ, ಪ್ರಕಾಶ ಕಜೆಕಾರು ಸಭೆಯಲ್ಲಿ ಸಲಹೆ ನೀಡಿದರು. ಸಮಿತಿಯ ಪ್ರಧಾನ ಕಾರ್ಯದರ್ಶಿ ರಾಜೀವ್ ಶೆಟ್ಟಿ ಎಡ್ತೂರು ಕಾರ್ಯಕ್ರಮ ನಿರೂಪಿಸಿದರು.







