ಡಿವೈಎಫ್‌ಐ ಉಳ್ಳಾಲ ವಲಯ ಸಮ್ಮೇಳನದ ಲೋಗೋ ಬಿಡುಗಡೆ

ಮಂಗಳೂರು, ಅ.6: ಡಿವೈಎಫ್‌ಐ ಉಳ್ಳಾಲ ವಲಯದ 14ನೇ ಸಮ್ಮೇಳನದ ಲೋಗೊ ಬಿಡುಗಡೆ ಕಾರ್ಯಕ್ರಮ ರವಿವಾರ ತೊಕ್ಕೊಟ್ಟಿನಲ್ಲಿ ನಡೆಯಿತು.
ಹಿರಿಯ ಮುಖಂಡರಾದ ಯು.ಬಿ. ಮಾರಪ್ಪ, ದುಗ್ಗಪ್ಪಪಾವೂರು, ಐತಪ್ಪಗಟ್ಟಿ, ಮೊಯ್ದಿನ್ ಉಚ್ಚಿಲ್ ಲೋಗೋ ಬಿಡುಗಡೆಗೊಳಿಸಿದರು.
ಈ ಸಂದರ್ಭ ಮಾತನಾಡಿದ ಯುಬಿ ಮಾರಪ್ಪ ಯುವಜನರಿಗೆ ಸರಿಯಾದ ಮಾರ್ಗದರ್ಶನ ನೀಡುವ ದೇಶದ ಏಕೈಕ ಸಂಘಟನೆ ಡಿವೈಎಫ್‌ಐ ಆಗಿದ್ದು, ಅದನ್ನು ಕಟ್ಟಿ ಬೆಳೆಸಬೇಕು. ದಾರಿ ತಪ್ಪುತ್ತಿರುವ ಯುವಜನರಿಗೆ ಡಿವೈಎಫ್‌ಐ ದಾರಿದೀಪವಾಗಬೇಕಿದೆ. ಆ ದಿಕ್ಕಿನಲ್ಲಿ ಸಮ್ಮೇಳನ ನಡೆಯಬೇಕು ಮತ್ತು ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಕರೆ ನೀಡಿದರು.
ಕಲಾವಿದ ಚೇತನ್ ಪುತ್ತೂರು ವಿನ್ಯಾಸಗೊಳಿಸಿದ ಲೋಗೊ ಬಿಡುಗಡೆ ಕಾರ್ಯಕ್ರಮದಲ್ಲಿ ಕಾರ್ಮಿಕರ ಮುಖಂಡರಾದ ಕೃಷ್ಣಪ್ಪ ಸಾಲ್ಯಾನ್, ಡಿವೈಎಫ್‌ಐ ಉಳ್ಳಾಲ ವಲಯ ಅಧ್ಯಕ್ಷ ಜೀವನ್‌ರಾಜ್ ಕುತ್ತಾರ್, ಕಾರ್ಯದರ್ಶಿ ರಝಾಕ್ ಮೊಂಟೆಪದವು, ವಲಯ ಮುಖಂಡರಾದ ಸಂತೋಷ್ ಶೆಟ್ಟಿ ಪಿಲಾರ್, ಅಶ್ರಫ್ ಹರೇಕಳ, ರಫೀಕ್ ಹರೇಕಳ, ಅಶ್ರಫ್ ಕೆಸಿ ರೋಡ್ ಮುಂತಾದವರು ಉಪಸ್ಥಿತರಿದ್ದರು.
...





