'ಶ್ರೀರಂಗಪಟ್ಟಣದಲ್ಲಿ ಉಗ್ರರ ಬಂಧನ' ವದಂತಿ ಸುಳ್ಳು: ಹೆಚ್ಚುವರಿ ಐಜಿಪಿ ಬಾಲಕೃಷ್ಣ

ಮೈಸೂರು, ಅ.6: ಯಾವುದೆ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಕಟ್ಟೆಚ್ಚರ ವಹಿಸಲಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಮತ್ತು ಹೆಚ್ಚುವರಿ ಐಜಿಪಿ ಕೆ.ಟಿ.ಬಾಲಕೃಷ್ಣ ತಿಳಿಸಿದರು.
ತಮ್ಮ ಕಚೆರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಮೂವರು ಉಗ್ರರನ್ನು ಬಂಧಿಸಲಾಗಿದೆ ಎಂಬುದು ಸುಳ್ಳು, ಅಂತಹ ಯಾವುದೇ ಪ್ರಕರಣ ನಡೆದಿಲ್ಲ. ನಾನೆ ಐಜಿಪಿ ಹುದ್ದೆಯ ಜವಾಬ್ದಾರಿ ನೋಡಿಕೊಳ್ಳುತ್ತಿರುವುದರಿಂದ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದಲ್ಲಿ ನಡೆದಿದೆ ಎಂಬುದೆಲ್ಲ ಸುಳ್ಳು ಎಂದು ಹೇಳಿದರು.
ಜಂಬೂಸವಾರಿ ವೇಳೆ ಯಾವುದೇ ರೀತಿಯ ತೊಂದರೆ ಆಗದಂತೆ ಪೊಲೀಸರು ನೋಡಿಕೊಳ್ಳಲಿದ್ದಾರೆ. ಎರಡನೇ ಹಂತದ ಬಂದೋಬಸ್ತ್ ಇಂದಿನಿಂದ ಪ್ರಾರಂಭವಾಗಿದ್ದು, ಪೊಲೀಸರು ಎಲ್ಲಾ ಕಡೆ ತಪಾಸಣೆ ಮಾಡಿ ಸಂಪೂರ್ಣ ಬಂದೋಬಸ್ತ್ ವಹಿಸಲಿದ್ದಾರೆ ಎಂದು ಹೇಳಿದರು.
ಪತ್ರಿಕಾಗೋಷ್ಟಿಯಲ್ಲಿ ಡಿಸಿಪಿಗಳಾದ ಮುತ್ತುರಾಜ್, ಕವಿತಾ ಉಪಸಸ್ಥಿತರಿದ್ದರು.
Next Story





