ಡಿ.ಕೆ.ಚೌಟ ಪ್ರಶಸ್ತಿಗೆ ಡಾ.ನಾ.ದಾಮೋದರ ಶೆಟ್ಟಿ ಆಯ್ಕೆ

ದಾಮೋದರ್-ಪ್ರಭುರಾಜ್
ಹೆಬ್ರಿ, ಅ.6: ಮುದ್ರಾಡಿ ನಮ ತುಳುವೆರ್ ಕಲಾ ಸಂಘಟನೆಯ ವತಿ ಯಿಂದ ನಾಟ್ಕ ಮುದ್ರಾಡಿಯ 34ನೆ ವರ್ಷಾಚರಣೆಯ ಪ್ರಯುಕ್ತ ನಡೆಯುತ್ತಿ ರುವ 19ನೇ ನವರಂಗೋತ್ಸವದಲ್ಲಿ ಕರ್ನಾಟಕದಲ್ಲಿ ಪ್ರಥಮ ಬಾರಿಗೆ ನಾಟಕಕಾರ, ಚಿಂತಕ ಡಿ.ಕೆ. ಚೌಟ ಅವರ ಸಂಸ್ಮರಣೆಗಾಗಿ ಪ್ರಶಸ್ತಿಯನ್ನು ನೀಡಲು ಉದ್ದೇಶಿಸಲಾಗಿದ್ದು, ಈ ಪ್ರಶಸ್ತಿಗೆ ಪ್ರೊ.ಡಾ.ನಾ.ದಾಮೋದರ ಶೆಟ್ಟಿ ಅವರನ್ನು ಆಯ್ಕೆ ಮಾಡಲಾಗಿದೆ.
ಕರ್ನಾಟಕ ಕರಾವಳಿಯ ಕುಂಬಳೆಯ ಡಾ.ನಾ.ದಾಮೋದರ ಶೆಟ್ಟಿ ಪ್ರಾಧ್ಯಾ ಪಕರಾಗಿ, ರೀಡರ್ ಆಗಿ ಸೇವೆ ಸಲ್ಲಿಸಿದ್ದು ಸಂಶೋಧಕರಾಗಿ, ಕವಿ, ಸಾಹಿತಿ, ಕಾದಂಬರಿಕಾರನಾಗಿ, ನಾಟಕಕಾರನಾಗಿ ನಾಡಿಗೆ ಅಪಾರ ಸೇವೆ ಸಲ್ಲಿಸಿದ್ದಾರೆ. ಅದೇ ರೀತಿ ರಂಗ ನಟ ನಿರ್ದೇಶಕ ರಾಯಚೂರಿನ ಪ್ರಭುರಾಜ್ ಅವರಿಗೆ ಬಿ.ವಿ.ಕಾರಂತ ಯುವ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು.
ಒಂಭತ್ತು ದಿನಗಳ ನವರಂಗೋತ್ಸದ ಸಮಾಪನಾ ಕಾರ್ಯಕ್ರಮ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭವು ಅ.8ರಂದು ನಾಟ್ಕದೂರು ಮುದ್ರಾಡಿಯಲ್ಲಿ ನಡೆಯಲಿದೆ. ರಾಜ್ಯದ ಮುಜರಾಯಿ ಮೀನುಗಾರಿಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅಧ್ಯಕ್ಷತೆ ವಹಿಸಲಿರುವರು.
ಚಂದ್ರಶೇಖರ ಚೌಟ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಭಾಗವಹಿಸುವರು ಎಂದು ಸಂಸ್ಥೆಯ ಅಧ್ಯಕ್ಷ ಸುಕುಮಾರ್ ವೆ ಹನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





