ಮಂಗಳೂರು ದಸರಾ ಉತ್ಸವಕ್ಕೆ ಜನಾರ್ದನ ಪೂಜಾರಿ ಚಾಲನೆ

ಮಂಗಳೂರು, ಅ. 6; ಕುದ್ರೋಳಿಯ ನವರಾತ್ರಿಯ ಉತ್ಸವದ ನಡುವೆ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿರುವ ಮಂಗಳೂರು ದಸರಾ ಉತ್ಸವಕ್ಕೆ ಶ್ರೀ ಕ್ಷೇತ್ರ ಕುದ್ರೋಳಿಯ ನವೀಕರಣದ ರೂವಾರಿ, ಮಾಜಿ ವಿತ್ತ ಸಚಿವ ಬಿ.ಜನಾರ್ದನ ಪೂಜಾರಿ ಚಾಲನೆ ನೀಡಿದರು.
ಜಿಲ್ಲಾ ಉಸ್ತುವಾರಿ ಸಚಿವ, ರಾಜ್ಯ ಮುಜರಾ ಯಿ ಖಾತೆಯ ಸಚಿವ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಮಂಗಳೂರು ದಸರಾ ಕಾರ್ಯಕ್ರಮದ ಪೂರ್ವ ಭಾವಿಯಾಗಿ ಜನಾರ್ದನ ಪೂಜಾರಿ ಯವರು ನೇತ್ರತ್ವದಲ್ಲಿ ಶ್ರೀ ಶಾರದಾ ಮಾತೆಗೆ ಧಾರ್ಮಿಕ ವಿಧಿಗಳೊಂದಿಗೆ ಪೂಜೆ ಸಲ್ಲಿಸಿ ಉತ್ಸವದ ಧಾರ್ಮಿಕ ಕಾರ್ಯ ಕ್ರಮ ಕ್ಕೆ ಚಾಲನೆ ನೀಡಿದರು.
ಸಮಾರಂಭದಲ್ಲಿ ಕುದ್ರೋಳಿ ಶ್ರೀ ಗೋಕರ್ಣ ನಾಥ ಕ್ಷೇತ್ರದ ಆಡಳಿತ ಮಂಡಳಿಯ ಅಧ್ಯಕ್ಷ ಎಚ್.ಎಸ್. ಸಾಯಿರಾಮ, ಪದ್ಮರಾಜ್, ಬಿ.ಮಾಧವ ಸುವರ್ಣ, ತಾರಾನಾಥ, ರವಿಶಂಕರ ಮಿಜಾರ್, ಕೆ.ಮಹೇಶ್ ಚಂದ್ರ, ಅಭಿವೃದ್ಧಿ ಸಮಿತಿ ಯ ಪದಾಧಿಕಾರಿಗಳಾದ ಊರ್ಮಿಳಾ ರಮೇಶ್ ಕುಮಾರ್, ಡಾ.ಬಿ.ಜಿ. ಸುವರ್ಣ, ದೇವೇಂದ್ರ ಪೂಜಾರಿ, ಹರಿಕೃಷ್ಣ ಬಂಟ್ವಾಳ, ಶ್ರೀ ಮತಿ ಮಾಲತಿ ಜನಾರ್ದನ ಪೂಜಾರಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಪತ್ರಕರ್ತ ಮನೋಹರ ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.





