ಮಂಗಳೂರು: ಸಂದೇಶ ಪ್ರತಿಪ್ಠಾನ ವತಿಯಿಂದ ಸಂವಹನ, ಸಾರ್ವಜನಿಕ ಸಂಪರ್ಕ ಕಾರ್ಯಾಗಾರ

ಮಂಗಳೂರು: ಸಂದೇಶ ಪ್ರತಿಪ್ಠಾನ ಮಂಗಳೂರು ಹಾಗೂ ಕರ್ನಾಟಕ ರೀಜನ್ ನ ಕಮಿಷನ್ ಫಾರ್ ಸೋಶಿಯಲ್ ಕಮ್ಯೂನಿಕೇಶನ್‌ನ ಸಹಭಾಗಿತ್ವದಲ್ಲಿ ಪರಿಣಾಮಕಾರಿ ಸಂವಹನ ಹಾಗೂ ಸಾರ್ವಜನಿಕ ಸಂಪರ್ಕದ ಕುರಿತು ಅ. 6 ರಿಂದ 8 ರವರೆಗೆ ಮೂರು ದಿನಗಳ ಕಾರ್ಯಾಗಾರವನ್ನು ಮಂಗಳೂರಿನ ಖ್ಯಾತ ವೈದರು, ವೈದ್ಯಕೀಯ ಸಲಹೆಗಾರರು, ಸಮಾಜಿಕ ಚಿಂತಕರು ಹಾಗೂ ಲೇಖಕರಾದ ಡಾ. ಎಡ್ವರ್ಡ್ ಎಲ್. ನಜರೆಥ್ ಉದ್ಘಾಟಿಸಿದರು.
ಪ್ರಸ್ತುತ ದಿನಗಳಲ್ಲಿ ಪರಿಣಾಮಕಾರಿ ಸಂವಹನ ಹಾಗೂ ಸಾರ್ವಜನಿಕ ಸಂಪರ್ಕದ ಮಾಹಿತಿಯ ಕೊರತೆಯಿಂದಾಗಿ ಸಾಕಷ್ಟು ಸಾಮಾಜಿಕ ಹಾಗೂ ಇನ್ನಿತರ ಸಮಸ್ಯೆಗಳು ಸಂಭವಿಸುತ್ತಿವೆ. ಈ ನಿಟ್ಟಿನಲ್ಲಿ ಕರ್ನಾಟಕ ರಾಜ್ಯದ ವಿವಿಧೆಡೆಯಿಂದ ಆಯ್ದ ಪ್ರತಿನಿಧಿಗಳಿಗಾಗಿ ಈ ಕಾರ್ಯಕ್ರಮ ವನ್ನು ಹಮ್ಮಿಕೊಂಡು ಪ್ರಗತಿಪರ ಸಾಮಾಜವನ್ನು ನಿರ್ಮಿಸಲು ಪ್ರಯತ್ನಿಸುತ್ತಿರುವ ಸಂದೇಶ ಸಂಸ್ಥೆಯ ಶ್ರಮವನ್ನು ಶ್ಲಾಘಿಸಿದರು.
ಸಂದೇಶ ಪ್ರತಿಷ್ಠಾನದ ನಿರ್ದೇಶಕರು ಹಾಗು ಸೋಶಿಯಲ್ ಕಮ್ಯೂನಿಕೇಶನ್ ಕಮಿಷನ್ ಇದರ ಕಾರ್ಯದರ್ಶಿಗಳಾದ ಫಾ. ಫ್ರಾನ್ಸಿನ್ ಅಸ್ಸಿಸ್ ಆಲ್ಮೇಡಾ ಅವರು ಮೂರು ದಿನದ ಈ ಕಾರ್ಯಾಗಾರದ ಧ್ಯೇಯೋದ್ದೇಶಗಳು ಹಾಗು ಮುಂದಿನ ಚಟುವಟಿಕೆಗಳು ಹಾಗು ಕಾರ್ಯವೈಖರಿಯ ಬಗ್ಗೆ ಮಾರ್ಗದರ್ಶನ ನೀಡಿದರು.
ಸಂದೇಶ ಸಂಸ್ಥೆಯ ಯೋಜನಾ ಸಮಿತಿಯ ಕ್ರೀಯಾಶೀಲ ಸದಸ್ಯರಾದ ಎಲಿಯಾಸ್ ಫೆರ್ನಾಂಡಿಸ್ ಕಾರ್ಯಗಾರದ ಯಶಸ್ಸಿಗೆ ಶುಭ ಕೋರಿದರು. ಸಂಸ್ಥೆಯ ಮ್ಯಾನೇಜರ್ ಹಾಗು ಸಾರ್ವಜನಿಕ ಸಂಪರ್ಕಾಧಿಕಾರಿ ಸವಿತ ಡಿಸೋಜ ಕಾರ್ಯಕ್ರಮ ನಿರೂಪಿಸಿದರು.







