ತೀರಾ ಹದಗೆಟ್ಟಿರುವ ಅರ್ಥವ್ಯವಸ್ಥೆ: ಶೇ.48 ಜನರ ಅಭಿಮತ

ಹೊಸದಿಲ್ಲಿ, ಅ.6: ದೇಶದ ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟಿರುವುದಾಗಿ ಶೇ.47.9ರಷ್ಟು ಜನತೆ ಅಭಿಪ್ರಾಯಪಟ್ಟಿದ್ದು , 2013ರ ಡಿಸೆಂಬರ್ ಬಳಿಕ ಇದೇ ಮೊದಲ ಬಾರಿಗೆ ಆರ್ಥಿಕತೆ ಹದಗೆಟ್ಟಿರುವುದಾಗಿ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮತ ವ್ಯಕ್ತವಾಗಿದೆ.
ಜೊತೆಗೆ, ಶೇ.52.5ರಷ್ಟು ಜನ ಉದ್ಯೋಗಾವಕಾಶ ಅತ್ಯಂತ ಕನಿಷ್ಟ ಮಟ್ಟಕ್ಕೆ ಇಳಿದಿರುವುದಾಗಿ ಅಭಿಪ್ರಾಯ ಪಟ್ಟಿದ್ದಾರೆ. ಮುಂದಿನ ದಿನದಲ್ಲಿ ಇದು ಇನ್ನಷ್ಟು ಹದಗೆಡಬಹುದು ಎಂದು ಶೇ.33.4ರಷ್ಟು ಜನ ಅಭಿಪ್ರಾಯಪಟ್ಟಿದ್ದಾರೆ. 2012ರ ಸೆಪ್ಟೆಂಬರ್ ಬಳಿಕ ಇದು ಅತ್ಯಧಿಕ ಪ್ರಮಾಣವಾಗಿದೆ.
ಶೇ.26.7 ಜನ ತಮ್ಮ ಆದಾಯ ಕಡಿಮೆಯಾಗಿರುವುದಾಗಿ ಹೇಳಿದ್ದಾರೆ. ಮುಂದಿನ ವರ್ಷ ಆದಾಯ ಹೆಚ್ಚಬಹುದು ಎಂದು ಶೇ.53 ಮಂದಿ ಅಭಿಪ್ರಾಯ ಸೂಚಿಸಿದ್ದಾರೆ. ತಾವು ಅನಗತ್ಯ ವೆಚ್ಚ ಕಡಿತಗೊಳಿಸಿರುವುದಾಗಿ ಶೇ.30.1 ಕುಟುಂಬಗಳು ತಿಳಿಸಿದ್ದರೆ, ಮುಂದಿನ ದಿನದಲ್ಲಿ ಅನಗತ್ಯ ವೆಚ್ಚಕ್ಕೆ ಕಡಿವಾಣ ಹಾಕುವುದಾಗಿ ಶೇ.26 ಮಂದಿ ಹೇಳಿದ್ದಾರೆ.
Next Story





