ಕುಟುಂಬದ ಆರು ಮಂದಿಯನ್ನು ಹತ್ಯೆ ಮಾಡಿದ್ದ ಹಂತಕಿ ಸೆರೆ

ತಿರುವನಂತಪುರ, ಅ.7: ಕೋಝಿಕ್ಕೋಡ್ ನ ಕೊಡಾತ್ತೇಯಿ ಎಂಬಲ್ಲಿ ಆಸ್ತಿ ಕಬಳಿಸಲು ಪತಿ ಸೇರಿದಂತೆ ಒಂದೇ ಕುಟುಂಬದ 6 ಮಂದಿಗೆ ವಿಷ ಉಣಿಸಿ ಹತ್ಯೆ ಮಾಡಿದ್ದ ಸರಣಿ ಹಂತಕಿಯನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಜೂಲಿ ಮತ್ತು ಆಕೆಯ ಎರಡನೇ ಗಂಡ ಶಾಜು ಹಾಗೂ ಇವರಿಗೆ ಸೈನೈಡ್ ಪೂರೈಸುತ್ತಿದ್ದ ಮತ್ತಿಬ್ಬರು ಆರೋಪಿಗಳು ಪೊಲೀಸರ ಬಲೆಗೆ ಬಿದ್ದಿದ್ದಾರೆ
2002ರಿಂದ 2016ರ ವರೆಗೆ ಈ ಕೊಲೆಗಳು ನಡೆದಿವೆ.
ಹಂತಕಿ ಜೂಲಿ ಮತ್ತು ಆಕೆಯ ಎರಡನೇ ಗಂಡ ಶಜು ಇದೀಗ ಪೊಲೀಸರ ಅತಿಥಿಗಳಾಗಿದ್ದಾರೆ. ಈ ಇಬ್ಬರಿಗೆ ಸೈನೈಡ್ ಪೂರೈಸುತ್ತಿದ್ದ ಮತ್ತಿಬ್ಬರನ್ನು ಕೂಡ ಬಂಧಿಸಲಾಗಿದೆ.
ಅತ್ತೆ ಅಣ್ಣಮ್ಮ ಥಾಮಸ್ (57) , ಮಾವ ಟಾಮ್ ಥಾಮಸ್, ಪತಿ ರಾಯ್ ಥಾಮಸ್, ಅಣ್ಣಮ್ಮ ಸಹೋದರ ಮ್ಯಾಥ್ಯೂ ಮಂಜಡಿಯಿಲ್ (67) , ಸಿಲಿ(27) ಆಕೆಯ 2 ಹರೆಯದ ಹೆಣ್ಣು ಮಗು ಅಲ್ಫೋನ್ಸನನ್ನು ಜೂಲಿ ಎಂಬವರಿಗೆ ಸೈನೈಡ್ ನೀಡಿ ಕೊಂದಿರುವುದಾಗಿ ಆರೋಪಿಸಲಾಗಿದೆ..
Next Story