ಫ್ರಾನ್ಸ್ ತಲುಪಿದ ರಕ್ಷಣಾ ಸಚಿವ ರಾಜ್ ನಾಥ್ ಸಿಂಗ್
ಪ್ಯಾರಿಸ್, ಅ.8: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು 36 ರಫೇಲ್ ಫೈಟರ್ ಜೆಟ್ಗಳಲ್ಲಿ ಮೊದಲನೆಯದನ್ನು ಭಾರತೀಯ ವಾಯುಪಡೆಯ ಪರವಾಗಿ ಸ್ವೀಕರಿಸಲು ಫ್ರಾನ್ಸ್ ಗೆ ತಲುಪಿದ್ದಾರೆ. ಸಿಂಗ್ ಅವರ ಭೇಟಿಯ ಸಮಯದಲ್ಲಿ ಆಯುಧ ಪೂಜೆ ನೆರವೇರಿಸಲಿದ್ದಾರೆ., ವಿಮಾನದಲ್ಲಿ ವಿಹರಿಸಲಿರುವ ಅವರು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೊನ್ ಅವರನ್ನು ಭೇಟಿ ಮಾಡುವ ನಿರೀಕ್ಷೆಯಿದೆ.
ಪ್ಯಾರಿಸ್ ಗೆ ಆಗಮಿಸಿದ ಸಿಂಗ್, "ಫ್ರಾನ್ಸ್ ನಲ್ಲಿರುವುದಕ್ಕೆ ಸಂತೋಷವಾಗಿದೆ. ಈ ಮಹಾನ್ ರಾಷ್ಟ್ರವು ಭಾರತದ ಪ್ರಮುಖ ಕಾರ್ಯತಂತ್ರದ ಪಾಲುದಾರ ಮತ್ತು ನಮ್ಮ ವಿಶೇಷ ಸಂಬಂಧವು ಔಪಚಾರಿಕ ಸಂಬಂಧಗಳ ಕ್ಷೇತ್ರಕ್ಕಿಂತಲೂ ಮೀರಿದೆ. ಉಭಯ ದೇಶಗಳು ಪ್ರಸ್ತುತ ಅಸ್ತಿತ್ವದಲ್ಲಿರುವ ಕಾರ್ಯತಂತ್ರದ ಸಹಭಾಗಿತ್ವವನ್ನು ವಿಸ್ತರಿಸುವ ಗುರಿಯನ್ನು ಹೊಂದಿದೆ. ಎಂದು ಅವರು ಹೇಳಿದರು.
Next Story