ಐಎಂಎ ಬಹುಕೋಟಿ ಹಗರಣ: ಜಾಮೀನು ಕೋರಿ ಹೈಕೋರ್ಟ್ ಮೆಟ್ಟಿಲೇರಿದ ಖಲೀಲ್
ಬೆಂಗಳೂರು, ಅ.8: ಐಎಂಎ ಕಂಪೆನಿ ವಂಚನೆ ಪ್ರಕರಣದ ಆರೋಪಿ ಖಲೀಮ ಉಲ್ಲಾ ಜಮಾಲ್ ಜಾಮೀನು ಕೋರಿ ಸಲ್ಲಿಸಿದ ಅರ್ಜಿ ಸಂಬಂಧ ಸಿಬಿಐಗೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ. ಜಮಾಲ್ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಕೆ.ಎನ್.ಫಣೀಂದ್ರ ಅವರಿದ್ದ ರಜಾಕಾಲದ ಏಕಸದಸ್ಯ ಪೀಠ, ಆಕ್ಷೇಪಣೆ ಸಲ್ಲಿಸುವಂತೆ ಪ್ರತಿವಾದಿಗಳಿಗೆ ನೋಟಿಸ್ ನೀಡಿ, ವಿಚಾರಣೆಯನ್ನು ಮುಂದೂಡಿತು.
ಪ್ರಕರಣದಲ್ಲಿ 25ನೆ ಆರೋಪಿಯಾಗಿರುವ ಖಲೀಲ್ ಉಲ್ಲಾ ಜಮಾಲ್, ಐಎಂಎ ಕಂಪೆನಿಯಿಂದ ವಸೂಲಿ ಮಾಡಿದ ಹಣದಲ್ಲಿ ಪತ್ನಿ ಹೆಸರಿಗೆ ಆಸ್ತಿ ಖರೀದಿಸಿದ ಆರೋಪ ಎದುರಿಸುತ್ತಿದ್ದಾನೆ. ಈ ಸಂಬಂಧ ಎಸ್ಐಟಿ ಜಮಾಲ್ ಅನ್ನು ಬಂಧಿಸಿತ್ತು.ಅಧೀನ ನ್ಯಾಾಲಯವು ಆತನ ಜಾಮೀನು ನಿರಾಕರಿಸಿ,
Next Story