ಅ. 12 : ಬೆಳ್ಳಾರೆಯಲ್ಲಿ ಆರೋಗ್ಯ ಮಾಹಿತಿ ಶಿಬಿರ, ಸನ್ಮಾನ ಕಾರ್ಯಕ್ರಮ
ವಿಟ್ಲ : ಬೆಳ್ಳಾರೆ ಶಂಸುಲ್ ಉಲಮಾ ಚಾರಿಟೇಬಲ್ ಟ್ರಸ್ಟ್ ಮತ್ತು ಎಸ್ಕೆಎಸ್ಸೆಸ್ಸೆಫ್ ಬೆಳ್ಳಾರೆ ಇದರ ವತಿಯಿಂದ ಆರೋಗ್ಯ ಮಾಹಿತಿ ಶಿಬಿರ ಮತ್ತು ಸಾಧಕರಿಗೆ, ಹಿರಿಯ ವ್ಯಕ್ತಿಗಳಿಗೆ ಸನ್ಮಾನ ಕಾರ್ಯಕ್ರವು ಅ.12 ರಂದು ಬೆಳ್ಳಾರೆಯ ರಾಜೀವ್ ಗಾಂಧಿ ಸಭಾಂಗಣದಲ್ಲಿ ನಡೆಯಲಿದೆ.
ನಜ್ಮುದ್ದೀನ್ ಪುಕೋಯ ತಂಙಳ್ ಅಲ್ ಹೈದ್ರೋಸಿ ಕಾರ್ಯಕ್ರಮ ಉದ್ಘಾಟಿಸಲಿದ್ದು, ಶಂಸುಲ್ ಉಲಮಾ ಟ್ರಸ್ಟ್ ಸ್ಥಾಪಕಾಧ್ಯಕ್ಷ ಯು ಎಚ್ ಅಬೂಬಕರ್ ಅಧ್ಯಕ್ಷತೆ ವಹಿಸುವರು.
ಝಕರಿಯಾ ಜುಮಾ ಮಸೀದಿಯ ಮಾಜಿ ಖತೀಬ್ ತ್ವಬೀಬ್ ಶಾಫಿ ಇರ್ಫಾನಿ ಫೈಝಿ ಉಪನ್ಯಾಸ ನೀಡಲಿದ್ದಾರೆ ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.
Next Story