ಮಂಗಳೂರು: ಉದ್ಯಮಿ ಮುಹಮ್ಮದ್ ಅಲಿ ಸೇಠ್ ನಿಧನ

ಮಂಗಳೂರು: ಪಾಂಡೇಶ್ವರ ನಿವಾಸಿ, ಉದ್ಯಮಿ ಮುಹಮ್ಮದ್ ಅಲಿ ಸೇಠ್ (85) ಅಲ್ಪ ಕಾಲದ ಅಸೌಖ್ಯದಿಂದ ಶುಕ್ರವಾರ ಮಧ್ಯಾಹ್ನ ನಿಧನರಾದರು.
ಅವರು ಬಂದರಿನ ಜುಮಾ ಮಸೀದಿ ಸಮೀಪದಲ್ಲಿ ಟಿನ್ ಮತ್ತು ಗಾಜಿನ ಅಂಗಡಿ ನಡೆಸುತ್ತಿದ್ದರು. ಮೃತರು ಪತ್ನಿ, ಐವರು ಪುತ್ರರು, ನಾಲ್ಕು ಮಂದಿ ಪುತ್ರಿಯರ ಸಹಿತ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ಮೃತರ ಅಂತಿಮ ಸಂಸ್ಕಾರವು ಶನಿವಾರ ಬೆಳಗ್ಗೆ ಬಂದರಿನ ಜುಮಾ ಮಸೀದಿ ವಠಾರದಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲ ತಿಳಿಸಿದೆ.
Next Story





