ಸರ್ವೊತ್ತಮ ಶೆಟ್ಟಿಗೆ ರಂಗಚಾವಡಿ ಪ್ರಶಸ್ತಿ ಪ್ರದಾನ

ಮಂಗಳೂರು, ಅ.11:ನಗರದ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಘಟನೆ ರಂಗಚಾವಡಿ ಮಂಗಳೂರು ಇದರ ವತಿಯಿಂದ ನಗರದ ಪುರಭವನದಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಅಬುದಾಬಿಯ ಕರ್ನಾಟಕ ಸಂಘದ ಅಧ್ಯಕ್ಷ ಸರ್ವೊತ್ತಮ ಶೆಟ್ಟಿಯವರಿಗೆ ರಂಗಚಾವಡಿ ಪ್ರಶಸ್ತಿಯನ್ನು ಖ್ಯಾತ ಚಲನಚಿತ್ರ ನಿರ್ಮಾಪಕ ಡಾ.ಸಂಜೀವ ದಂಡಕೇರಿಯವರ ಅಧ್ಯಕ್ಷ ತೆಯಲ್ಲಿ ನೀಡಲಾಯಿತು.
ಸಮಾರಂಭವನ್ನು ವಿಶ್ರಾಂತ ಕುಲಪತಿ ಡಾ.ಬಿ.ಎ.ವಿವೇಕ ರೈ ಉದ್ಘಾಟಿಸಿದರು. ಕೊಲ್ಲಿ ರಾಷ್ಟ್ರದಲ್ಲಿ ತುಳು, ಭಾಷೆಯ ಬೆಳವಣಿಗೆಯಲ್ಲಿ ತೊಡಗಿರುವ ಸರ್ವೊತ್ತಮ ಶೆಟ್ಟಿಯವರ ತಂಡವನ್ನು ಗುರುತಿಸಿರುವ ರಂಗಚಾವಡಿಯ ಕಾರ್ಯ ಶ್ಲಾಘನೀಯ ಎಂದು ಡಾ.ವಿವೇಕ ರೈ ಶುಭ ಹಾರೈಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಸರ್ವೊತ್ತಮ ಶೆಟ್ಟಿ, ಈ ತುಳು, ಕನ್ನಡ ಬಾಷೆ ಬೆಳವಣಿಗೆಗೆ ಕಾರ್ಯನಿರ್ವಹಿಸುತ್ತಿರುವ ಗಲ್ಫ್ ದೇಶದ ಎಲ್ಲರಿಗೂ ಈ ಗೌರವ ಸಲ್ಲಬೇಕು ಎಂದರು.
ಕನ್ನಡ ಸಮಾರಂಭದ ಯುನೈಟೆಡ್ ಯುಎಇ ಎಕ್ಸ್ ಚೇಂಜ್ ನ ಮಾಜಿ ಅಧ್ಯಕ್ಷ ಸಿ.ಎ.ಸುಧೀರ್ ಕುಮಾರ್ ಶೆಟ್ಟಿ, ಉದ್ಯಮಿ ಯಾದವ ಕೊಟ್ಯಾನ್, ಚಲನಚಿತ್ರ ನಿರ್ಮಾಪಕ ಹರೀಶ್ ಬಂಗೇರ ದುಬೈ, ಪರಂಗಿಪೇಟೆ ರೋಟರಿ ಕ್ಲಬ್ ಅಧ್ಯಕ್ಷ ಎ.ಕೆ.ಜಯರಾಮಶೇಖ, ಉದ್ಯಮಿ ದಯಾನಂದ ಹೆಜಮಾಡಿ, ಬಿಲ್ಲವಾಸ್ ದುಬೈ ಸಂಘಟನೆಯ ಮುಖಂಡ ಸತೀಶ್ ಪೂಜಾರಿ, ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಸುಧಾಕರ ಪೂಂಜ, ತುಳು ನಾಟಕ ಕಲಾವಿದರ ಒಕ್ಕೂಟದ ಅಧ್ಯಕ್ಷ ಕಿಶೋರ್ ಡಿ.ಶೆಟ್ಟಿ, ಉಷಾ ಸರ್ವೊತ್ತಮ ಶೆಟ್ಟಿ, ರಂಗನಟ ವಿ.ಜಿ.ಪಾಲ್, ರಂಗಚಾವಡಿ ಸಂಚಾಲಕ ಜಗನ್ನಾಥ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ನವೀನ್ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಕದ್ರಿ ನವನೀತ ಶೆಟ್ಟಿ ಅತಿಥಿಗಳನ್ನು ಪರಿಚಯಿಸಿದರು.










