Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಉಯಿಘರ್ ಮುಸ್ಲಿಮರ ಗೋರಿಗಳನ್ನೂ...

ಉಯಿಘರ್ ಮುಸ್ಲಿಮರ ಗೋರಿಗಳನ್ನೂ ಬಿಡುತ್ತಿಲ್ಲ ಚೀನಾ ಸರಕಾರ

ಅಧಿಕಾರಿಗಳಿಂದ ನಿರಂತರ ಕಿರುಕುಳ, ಮೂಲಭೂತ ಹಕ್ಕುಗಳಿಗೂ ಅವಕಾಶವಿಲ್ಲ

ವಾರ್ತಾಭಾರತಿವಾರ್ತಾಭಾರತಿ11 Oct 2019 9:16 PM IST
share
ಉಯಿಘರ್ ಮುಸ್ಲಿಮರ ಗೋರಿಗಳನ್ನೂ ಬಿಡುತ್ತಿಲ್ಲ ಚೀನಾ ಸರಕಾರ

ಚೀನಾದ ಝಿಂಜಿಯಾಂಗ್ ಪ್ರಾಂತ್ಯದಲ್ಲಿ ಹೆಚ್ಚಾಗಿ ನೆಲೆಸಿರುವ ಅಲ್ಪಸಂಖ್ಯಾತ ಉಯಿಘರ್ ಮುಸ್ಲಿಮರ ಮೇಲೆ ಸರಕಾರವು ವರ್ಷಗಳಿಂದಲೂ ಎಸಗುತ್ತಿರುವ ದೌರ್ಜನ್ಯಗಳು ಗುಟ್ಟಾಗಿ ಉಳಿದಿಲ್ಲ. ಈ ಅಲ್ಪಸಂಖ್ಯಾತ ಸಮುದಾಯವನ್ನು ಚೀನಿ ಸರಕಾರವು ದಮನಿಸುತ್ತಲೇ ಬಂದಿದೆ. ಬದುಕಿದ್ದಾಗ ದೌರ್ಜನ್ಯಗಳನ್ನು ಅನುಭವಿಸಿದ ಉಯಿಘರ್ ಮುಸ್ಲಿಮರ ಗೋರಿಗಳನ್ನೂ ಸರಕಾರವು ಬಿಡುತ್ತಿಲ್ಲ ಎಂದು ಎಎಫ್ ಪಿಯನ್ನು ಉಲ್ಲೇಖಿಸಿ economictimes.com ವರದಿ ಮಾಡಿದೆ.

ಚೀನಾ ಸರಕಾರವು ಉಯಿಘರ್ ಕುಟುಂಬಗಳ ಹಲವಾರು ತಲೆಮಾರುಗಳ ಗೋರಿಗಳನ್ನು ಧ್ವಂಸಗೊಳಿಸುತ್ತಿದೆ. ಈಗ ಖಬರಸ್ತಾನ್‌ ಗಳಲ್ಲಿ ಕಂಡು ಬರುತ್ತಿರುವುದು ಅಲ್ಲಲ್ಲಿ ಹರಡಿ ಬಿದ್ದಿರುವ ಮೂಳೆಗಳು ಮತ್ತು ಮುರಿದು ಬಿದ್ದಿರುವ ಗೋರಿಗಳು ಮಾತ್ರ. ಇದು ಝಿಂಜಿಯಾಂಗ್ ಪ್ರಾಂತ್ಯದಲ್ಲಿ ಈ ಜನಾಂಗೀಯ ಸಮುದಾಯದ ಅನನ್ಯತೆಯನ್ನೇ ಅಳಿಸುವ ಪ್ರಯತ್ನವಾಗಿದೆ ಎಂದು ಮಾನವ ಹಕ್ಕುಗಳ ಹೋರಾಟಗಾರರು ಆರೋಪಿಸಿದ್ದಾರೆ.

ಕೇವಲ ಎರಡು ವರ್ಷಗಳಲ್ಲಿ ಈ ಪ್ರಾಂತ್ಯದಲ್ಲಿಯ ಡಝನ್‌ ಗಟ್ಟಲೆ ಖಬರಸ್ತಾನ್‌ ಗಳನ್ನು ಧ್ವಂಸಗೊಳಿಸಿಲಾಗಿದೆ ಎನ್ನುವುದನ್ನು ಉಪಗ್ರಹ ಚಿತ್ರಗಳ ವಿಶ್ಲೇಷಕ ಸಂಸ್ಥೆ ಅರ್ತ್‌ರೈಸ್ ಅಲಯನ್ಸ್ ಜೊತೆ ಸುದ್ದಿಸಂಸ್ಥೆ ಎಎಫ್‌ಪಿ ನಡೆಸಿದ ತನಿಖೆಯು ಬಯಲಿಗೆಳೆದಿದೆ ಎಂದು economictimes.com ವರದಿ ಮಾಡಿದೆ.

ಕೆಲವು ಸಮಾಧಿಗಳನ್ನು ಕೊಂಚ ಕಾಳಜಿಯೊಂದಿಗೆ ತೆರವುಗೊಳಿಸಲಾಗಿದೆ. ಮೂರು ಕಡೆಗಳಲ್ಲಿ ಗೋರಿಗಳಿಂದ ಹೊರತೆಗೆದ ಮೂಳೆಗಳು ಹರಡಿ ಬಿದ್ದಿವೆ. ಇತರ ಕಡೆಗಳಲ್ಲಿ ಗೋರಿಗಳನ್ನು ಒಡೆಯಲಾಗಿದ್ದು,ಅವುಗಳ ಜಾಗದಲ್ಲಿ ಈಗ ಇಟ್ಟಿಗೆಯ ರಾಶಿಗಳಿವೆ. ಖಬರಸ್ತಾನ್‌ಗಳ ಧ್ವಂಸಕ್ಕೆ ನಗರಗಳ ಅಭಿವೃದ್ಧಿಯಂತಹ ಕಾರಣಗಳನ್ನು ಅಧಿಕಾರಿಗಳು ನೀಡುತ್ತಿದ್ದರೆ, ಈ ಧ್ವಂಸ ಕಾರ್ಯಾಚರಣೆಯು ತಮ್ಮ ಬದುಕಿನ ಪ್ರತಿಯೊಂದೂ ಮಗ್ಗುಲಿನ ಮೇಲೆ ನಿಯಂತ್ರಣ ಸಾಧಿಸುವ ಸರಕಾರಿ ದಾಳಿಯ ಭಾಗವಾಗಿದೆ ಎನ್ನುತ್ತಾರೆ ಉಯಿಘರ್‌ಗಳು.

"ನಾವು ಏನಾಗಿದ್ದೆವು ಎನ್ನ್ನುವುದರ ಯಾವುದೇ ಸಾಕ್ಯ್ಷಾಧಾರಗಳನ್ನು ಅಳಿಸಿಹಾಕುವುದು ಮತ್ತು ನಮ್ಮ ಅಸ್ಮಿತೆಯಿಂದ ಬೇರ್ಪಡಿಸಿ ನಮ್ಮನ್ನು ಹ್ಯಾನ್ ಚೀನಿಯರಂತೆ ಮಾಡುವುದು ಚೀನಾ ಸರಕಾರದ ಉದ್ದೇಶವಾಗಿದೆ. ನಮ್ಮ ಪೂರ್ವಜರನ್ನು ದಫನ ಮಾಡಿದ್ದ ಖಬರ್ ಸ್ತಾನಗಳನ್ನು ಧ್ವಂಸಗೊಳಿಸಲಾಗಿದೆ. ನಮ್ಮ ಇತಿಹಾಸ, ನಮ್ಮ ಹೆತ್ತವರು ಮತ್ತು ನಮ್ಮ ಪೂರ್ವಜರ ನೆನಪುಗಳಿಂದ ನಮ್ಮನ್ನು ಪ್ರತ್ಯೇಕಿಸಲು ಈ ಎಲ್ಲ ಐತಿಹಾಸಿಕ ಸ್ಥಳಗಳನ್ನು ಅವರು ಧ್ವಂಸಗೊಳಿಸುತ್ತಿದ್ದಾರೆ" ಎನ್ನುವುದು ಸ್ಥಳೀಯ ಉಯಿಘರ್‌ ಗಳ ಅಳಲು.

ಧಾರ್ಮಿಕ ಉಗ್ರವಾದ ಮತ್ತು ಪ್ರತ್ಯೇಕತಾವಾದವನ್ನು ಹತ್ತಿಕ್ಕುವ ನೆಪದಲ್ಲಿ ಸುಮಾರು 10 ಲಕ್ಷ ಉಯಿಘರ್ ಮುಸ್ಲಿಮರನ್ನು ಝಿಂಜಿಯಾಂಗ್‌ ನ ಪುನರ್‌ ಶಿಕ್ಷಣ ಶಿಬಿರಗಳಲ್ಲಿ ಕೂಡಿ ಹಾಕಲಾಗಿದೆ. ಹೊರಗಿದ್ದವರ ಮೇಲೆ ಕಟ್ಟುನಿಟ್ಟಿನ ನಿಗಾಯಿರಿಸಲಾಗಿದ್ದು, ಅಧಿಕಾರಿಗಳು ಅವರ ಮನೆಗಳಿಗೆ ತೆರಳಿ ಕಿರುಕುಳಗಳನ್ನು ನೀಡುತ್ತಿದ್ದಾರೆ ಎಂದು ಆರೋಪಿಸಲಾಗುತ್ತಿದೆ. ಹಲವಾರು ನಿರ್ಬಂಧಗಳ ಜೊತೆಗೆ ಉಯಿಘರ್ ಮುಸ್ಲಿಮರು ಗಡ್ಡ ಬಿಡುವುದನ್ನು ಮತ್ತು ಮಹಿಳೆಯರು ಪರ್ದಾ ಧರಿಸುವುದನ್ನು ನಿಷೇಧಿಸಲಾಗಿದೆ.

ಉಯಿಘರ್‌ ಗಳನ್ನು ತಾನು ನಡೆಸಿಕೊಳ್ಳುತ್ತಿರುವ ರೀತಿಯ ಬಗ್ಗೆ ಜಾಗತಿಕ ಟೀಕೆಗಳು ಹೆಚ್ಚುತ್ತಿದ್ದರೂ ಚೀನಾ ಉದ್ಧಟತನವನ್ನು ಮೆರೆಯುತ್ತಿದೆ. ಈ ವಾರ ಅಮೆರಿಕವು ಉಯಿಘರ್‌ ಗಳ ಮಾನವ ಹಕ್ಕುಗಳ ಉಲ್ಲಂಘನೆಗಾಗಿ 28 ಚೀನಿ ಸಂಸ್ಥೆಗಳನ್ನು ಕಪ್ಪು ಪಟ್ಟಿಗೆ ಸೇರಿಸಿದ್ದು, ಉಯಿಘರ್‌ ಗಳ ಮೇಲೆ ದೌರ್ಜನ್ಯವೆಸಗಿದ ಅಧಿಕಾರಿಗಳಿಗೆ ವೀಸಾ ನೀಡುವುದಿಲ್ಲವೆಂದು ಘೋಷಿಸಿದೆ.

ಉಪಗ್ರಹ ಚಿತ್ರಗಳ ವಿಶ್ಲೇಷಣೆಯಂತೆ ಚೀನಿ ಸರಕಾರವು 2014ರಿಂದ ಕನಿಷ್ಠ 45 ಉಯಿಘರ್ ಸಮುದಾಯದ ಖಬರಸ್ತಾನ್ ಗಳನ್ನು ಧ್ವಂಸಗೊಳಿಸಿದೆ. ಈ ಪೈಕಿ 30 ಕಳೆದ ಎರಡು ವರ್ಷಗಳಲ್ಲಿ ನಾಮಾವಶೇಷಗೊಂಡಿವೆ.

ಪ್ರಸಿದ್ಧ ವ್ಯಕ್ತಿಗಳ ಗೋರಿಗಳನ್ನೂ ಸರಕಾರವು ಬಿಟ್ಟಿಲ್ಲ. ಅಕ್ಸು ಎಂಬಲ್ಲಿ ಸ್ಥಳೀಯ ಅಧಿಕಾರಿಗಳು ಬೃಹತ್ ಖಬರಸ್ತಾನವನ್ನು ಉದ್ಯಾನವನವನ್ನಾಗಿ ಪರಿವರ್ತಿಸಿದ್ದಾರೆ. ಇದೇ ಖಬರಸ್ತಾನದಲ್ಲಿ ಖ್ಯಾತ ಉಯಿಘರ್ ಕವಿ ಲುತ್ಫುಲ್ಲಾ ಮುತ್ತಲಿಬ್ ಅವರನ್ನು ದಫನ ಮಾಡಲಾಗಿತ್ತು. ಪಾರ್ಕ್ ಅಭಿವೃದ್ಧಿಗೊಳಿಸಲು ಇಲ್ಲಿಯ ಗೋರಿಗಳನ್ನು ಮರಳುಗಾಡಿನಲ್ಲಿಯ ಕೈಗಾರಿಕಾ ಪ್ರದೇಶವೊಂದರಲ್ಲಿಯ ನೂತನ ಖಬರಸ್ತಾನಕ್ಕೆ ಸ್ಥಳಾಂತರಿಸಲಾಗಿತ್ತು. ಮುತ್ತಲಿಬ್ ಅವರ ಅವಶೇಷಗಳು ಏನಾಗಿವೆ ಎಂಬ ಬಗ್ಗೆ ಅಲ್ಲಿಯ ಕೇರ್‌ ಟೇಕರ್‌ ಗೂ ಯಾವುದೇ ಮಾಹಿತಿಯಲ್ಲ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X