ಅ.14: ಎಡಪಕ್ಷಗಳಿಂದ ಸಾರ್ವಜನಿಕ ಸಭೆ
ಮಂಗಳೂರು, ಅ.11: ದೇಶದಲ್ಲಿ ಹೆಚ್ಚುತ್ತಿರುವ ಆರ್ಥಿಕ ಬಿಕ್ಕಟ್ಟು ಹಾಗೂ ಜನಸಾಮಾನ್ಯರು ಅನುಭವಿಸುತ್ತಿರುವ ಸಂಕಷ್ಟಗಳ ವಿರುದ್ದ ಎಡಪಕ್ಷಗಳು ಕರೆ ನೀಡಿದ ದೇಶಾದ್ಯಂತದ ಪ್ರತಿಭಟನೆಯ ಭಾಗವಾಗಿ ಸಿಪಿಐ ಮತ್ತು ಸಿಪಿಎಂ ಅ.14ರಂದು ಸಂಜೆ 4:30ಕ್ಕೆ ದ.ಕ.ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ ಸಾರ್ವಜನಿಕ ಆಯೋಜಿಸಿದೆ.
ಇತ್ತೀಚಿನ ವರ್ಷಗಳಲ್ಲಿ ದೇಶದಲ್ಲಿ ಬಲಪಂಥೀಯ ರಾಜಕೀಯವು ತೀವ್ರ ಮುನ್ನಡೆಯನ್ನು ಸಾಧಿಸುತ್ತಿದ್ದು,ಅದು ವಿವಿಧ ಸ್ವರೂಪಗಳಲ್ಲಿ ವ್ಯಕ್ತಗೊಳ್ಳುತ್ತಿದೆ.ಮತ್ತೊಂದು ಕಡೆ ದೇಶದ ಅರ್ಥ ವ್ಯವಸ್ಥೆಯು ಗಂಭೀರವಾದ ಬಿಕ್ಕಟ್ಟನ್ನು ಎದುರಿಸುತ್ತಿದೆ. ಉತ್ಪಾದನೆಯಲ್ಲಿ ದೊಡ್ಡ ಕಡಿತಗಳಾಗುವ ಮೂಲಕ ಉದ್ಯೋಗ ನಷ್ಟಗಳು ಹೆಚ್ಚುತ್ತಿದೆ. ನೋಟು ರದ್ದತಿ ಹಾಗೂ ಜಿಎಸ್‌ಟಿಯಿಂದಾಗಿ ದೇಶದ ಆರ್ಥಿಕತೆಗೆ ಭಾರೀ ಹೊಡೆತ ಬಿದ್ದರೂ ಕೇಂದ್ರ ಸರಕಾರವು ಅದನ್ನು ನಿರಾಕರಿಸುತ್ತಲೇ ಬಂದಿದೆ ಎಂದು ಆಪಾದಿಸಿರುವ ಎಡಪಕ್ಷಗಳು,ಈ ನಿಟ್ಟಿನಲ್ಲಿ ಜನ ಜಾಗೃತಿಗೊಳಿಸಲು ಸಭೆಯನ್ನು ಆಯೋಜಿಸಲಾಗಿದೆ ಎಂದು ಪ್ರಕಟನೆ ತಿಳಿಸಿದೆ.
Next Story





