Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಪೀಟರ್ ಹಾಂಡ್ಕಿಗೆ ನೊಬೆಲ್ ಸಾಹಿತ್ಯ...

ಪೀಟರ್ ಹಾಂಡ್ಕಿಗೆ ನೊಬೆಲ್ ಸಾಹಿತ್ಯ ಪ್ರಶಸ್ತಿ ವಿರುದ್ಧ ಹಲವು ದೇಶಗಳಲ್ಲಿ ಆಕ್ರೋಶ

ಕಾರಣವೇನು ಗೊತ್ತಾ?

ವಾರ್ತಾಭಾರತಿವಾರ್ತಾಭಾರತಿ11 Oct 2019 11:32 PM IST
share
ಪೀಟರ್ ಹಾಂಡ್ಕಿಗೆ ನೊಬೆಲ್ ಸಾಹಿತ್ಯ ಪ್ರಶಸ್ತಿ ವಿರುದ್ಧ ಹಲವು ದೇಶಗಳಲ್ಲಿ ಆಕ್ರೋಶ

ಬೆಲ್ಗ್ರೇಡ್ (ಸರ್ಬಿಯ), ಅ. 11: ಆಸ್ಟ್ರಿಯದ ಸಾಹಿತಿ ಪೀಟರ್ ಹಾಂಡ್ಕಿಗೆ ನೊಬೆಲ್ ಸಾಹಿತ್ಯ ಪ್ರಶಸ್ತಿ ನೀಡಿರುವುದಕ್ಕೆ ಆಲ್ಬೇನಿಯ, ಬೋಸ್ನಿಯ ಮತ್ತು ಕೊಸೊವೊ ದೇಶಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ. ಈ ದೇಶಗಳಲ್ಲಿ ಹಾಂಡ್ಕಿರನ್ನು ಸರ್ಬಿಯದ ದಿವಂಗತ ನಾಯಕ ಸ್ಲೊಬೊದನ್ ಮಿಲೊಸೆವಿಚ್‌ರ ಅಭಿಮಾನಿ ಎಂಬುದಾಗಿ ವ್ಯಾಪಕವಾಗಿ ಪರಿಗಣಿಸಲಾಗಿದೆ.

 1990ರ ದಶಕದಲ್ಲಿ, ಈ ಹಿಂದಿನ ಯುಗೊಸ್ಲಾವಿಯ ದೇಶ ವಿಭಜನೆಗೊಂಡ ಸಂದರ್ಭದಲ್ಲಿ ನಡೆದ ರಕ್ತಪಾತದ ವೇಳೆ ಹಾಂಡ್ಕಿ ಸರ್ಬಿಯನ್ನರ ಪ್ರಬಲ ಸಮರ್ಥಕರಾಗಿದ್ದರು. ಅಷ್ಟೇ ಅಲ್ಲದೆ, ಅವರು ಸರ್ಬಿಯನ್ನರನ್ನು ನಾಝಿ ಆಡಳಿತದ ಅಡಿಯಲ್ಲಿ ಇದ್ದ ಯಹೂದಿಗಳಿಗೆ ಹೋಲಿಸಿದ್ದರು. ಬಳಿಕ, ಅವರು ಈ ಹೇಳಿಕೆಯನ್ನು ಹಿಂದಕ್ಕೆ ಪಡೆದುಕೊಂಡಿದ್ದಾರೆ.

ಅವರ 1996ರ ಪ್ರಯಾಣ ಕಥನ ‘ವಿ ಜರ್ನಿ ಟು ದ ರಿವರ್ಸ್: ಜಸ್ಟೀಸ್ ಫಾರ್ ಸರ್ಬಿಯ’ ಭಾರೀ ಬಿರುಗಾಳಿಯನ್ನು ಎಬ್ಬಿಸಿತ್ತು. ಬೆಲ್ಗ್ರೇಡ್ ಮೇಲೆ ನ್ಯಾಟೊ ನಡೆಸಿದ ದಾಳಿಯನ್ನು ಖಂಡಿಸಿ 1999ರಲ್ಲಿ ಅವರು ಜರ್ಮನಿಯ ಪ್ರತಿಷ್ಠಿತ ‘ಬೂಕರ್’ ಪ್ರಶಸ್ತಿಯನ್ನು ಹಿಂದಿರುಗಿಸಿದ್ದರು.

 ‘‘ನೊಬೆಲ್ ಪ್ರಶಸ್ತಿಯೊಂದರ ಕಾರಣಕ್ಕಾಗಿ ವಾಂತಿ ಮಾಡಬೇಕಾಗಿ ಬರುತ್ತದೆ ಎನ್ನುವುದನ್ನು ನಾನೆಂದೂ ಯೋಚಿಸಿಲ್ಲ’’ ಎಂದು ಆಲ್ಬೇನಿಯದ ಪ್ರಧಾನಿ ಎಡಿ ರಮ ಟ್ವೀಟ್ ಮಾಡಿದ್ದಾರೆ.

 ‘‘ನೊಬೆಲ್ ಅಕಾಡೆಮಿಯಂಥ ಶ್ರೇಷ್ಠ ನೈತಿಕ ಪ್ರಾಧಿಕಾರವೊಂದು ಮಾಡಿರುವ ಅವಮಾನಕಾರಿ ಆಯ್ಕೆಯನ್ನು ಗಮನಿಸಿದರೆ, ನಾಚಿಕೆಗೆಡುವುದೇ ಹೊಸ ಮೌಲ್ಯ ಎಂಬಂತಾಗಿದೆ. ಇಲ್ಲ, ಜನಾಂಗವಾದ ಮತ್ತು ಜನಾಂಗೀಯ ಹತ್ಯೆಗೆ ನಾವು ಇಷ್ಟೊಂದು ಸಂವೇದನಾರಹಿತರಾಗಿರಲು ಸಾಧ್ಯವಿಲ್ಲ’’ ಎಂದು ಅವರು ಹೇಳಿದ್ದಾರೆ.

ವಿವಾದಾಸ್ಪದ, ನಾಚಿಕೆಗೇಡು: ಬೋಸ್ನಿಯದ ಸಹ ಅಧ್ಯಕ್ಷ ಸೆಫಿಕ್ ಝಫೆರೊವಿಚ್

ಹಾಂಡ್ಕಿಗೆ ನೊಬೆಲ್ ಪ್ರಶಸ್ತಿ ನೀಡಿರುವುದು ‘‘ವಿವಾದಾಸ್ಪದ ಮತ್ತು ನಾಚಿಕೆಗೇಡು’’ ಎಂದು ಬೋಸ್ನಿಯದ ಸಹ ಅಧ್ಯಕ್ಷ ಸೆಫಿಕ್ ಝಫೆರೊವಿಚ್ ಬಣ್ಣಿಸಿದ್ದಾರೆ.

‘‘ಸ್ಲೊಬೊದನ್ ಮಿಲೊಸೆವಿಚ್ ಮತ್ತು ಅವರ ಹಿಂಬಾಲಕರನ್ನು ಹಾಂಡ್ಕಿ ಸಮರ್ಥಿಸುತ್ತಿದ್ದರು ಮತ್ತು ರಕ್ಷಿಸುತ್ತಿದ್ದರು ಎನ್ನುವ ವಾಸ್ತವವನ್ನು ನೊಬೆಲ್ ಪ್ರಶಸ್ತಿ ಸಮಿತಿ ಸುಲಭವಾಗಿ ನಿರ್ಲಕ್ಷಿಸಿರುವುದು ನಾಚಿಕೆಗೇಡು’’ ಎಂದು ಅವರು ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

ಜನಾಂಗೀಯ ಹತ್ಯೆ ಸೇರಿದಂತೆ ಗಂಭೀರ ಯುದ್ಧಾಪರಾಧಗಳಿಗಾಗಿ ಮಿಲೊಸೆವಿಚ್‌ರ ಸೇನಾ ಮುಖ್ಯಸ್ಥ ರಾಟ್ಕೊ ಮಲಾಡಿಕ್‌ಗೆ ವಿಶ್ವಸಂಸ್ಥೆಯ ನ್ಯಾಯಾಲಯವೊಂದು ಜೈಲು ಶಿಕ್ಷೆ ವಿಧಿಸಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X