ರಂಗಕಲೆ ಅನಂತವಾದುದು: ಎಂ.ಎಸ್.ಭಟ್

ಮಲ್ಪೆ, ಅ.11: ಆಸಕ್ತಿಯಿಂದ ರಂಗಭೂಮಿಯ ವಿಚಾರಗಳನ್ನು ಮೈಗೂಡಿಸಿ ಕೊಳ್ಳುವ ನಾವು ಸದಾ ವಿದ್ಯಾರ್ಥಿಗಳಾಗಿರಬೇಕು. ರಂಗಭೂಮಿಯ ಕಲಿಕೆಯು ಅನಂತವಾಗಿರುವ ಕಲಾಕ್ಷೇತ್ರ. ನಿರಂತರ ಕಲೆಯ ಅರಿವಿನಿಂದ ಕ್ರಿಯಾಶೀಲ ರಾಗಿರಲು ಸಾಧ್ಯ ಎಂದು ಹಿರಿಯ ರಂಗನಟ ಎಂ.ಎಸ್.ಭಟ್ ಹೇಳಿದ್ದಾರೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದೊಂದಿಗೆ ಸುಮನಸಾ ಕೊಡವೂರು ತನ್ನ ಸಂಸ್ಥೆಯ ಸದಸ್ಯರಿಗೆ ಏರ್ಪಡಿಸಿರುವ ಚೈತನ್ಯ ರಂಗ ಶಿಬಿರವನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡುತಿದ್ದರು.
ರಂಗ ಶಿಬಿರಗಳು ಕಲಾವಿದನಿಗೆ ಹೊಸ ಕಲ್ಪನೆ, ಹೊಸ ಆಶಯಗಳನ್ನು ಹೊಂದಲು ಸಹಕಾರಿಯಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಶಿಬಿರದ ನಿರ್ದೇಶಕ ನೀನಾಸಂ ಪದವೀಧರ ಶರತ್ ಎಸ್., ಸುಮನಸಾ ಅಧ್ಯಕ್ಷ ಪ್ರಕಾಶ್ ಜಿ.ಕೊಡವೂರು ಉಪಸ್ಥಿತರಿದ್ದರು. ರಂಗಕರ್ಮಿ ಯೋಗೀಶ್ ಕೊಳಲಗಿರಿ ಕಾರ್ಯಕ್ರಮ ನಿರೂಪಿಸಿದರು.
Next Story





