ಬಾರಕೂರು ಮಸೀದಿ ಅಧ್ಯಕ್ಷರಾಗಿ ಕಾಸಿಮ್ ಬಾರಕೂರು

ಉಡುಪಿ, ಅ.11: ಹಝರತ್ ಮಾಲಿಕ್ ದಿನಾರ್ ಇವರಿಂದ ಸ್ಥಾಪಿಸಲ್ಪಟ್ಟ ಕರ್ನಾಟಕದ ಮೊದಲ ಮಸೀದಿಯಾಗಿರುವ ಬಾರಕೂರು ಮಾಲಿಕ್ ದಿನಾರ್ ಜುಮಾ ಮಸೀದಿಯ ಆಡಳಿತ ಸಮಿತಿಯ ಅಧ್ಯಕ್ಷರಾಗಿ ಕಾಸಿಮ್ ಬಾರಕೂರು ಆಯ್ಕೆಯಾಗಿದ್ದಾರೆ.
ಜಿಲ್ಲಾ ವಕ್ಫ್ ಸಲಹಾ ಮಂಡಳಿಯ ಅಧ್ಯಕ್ಷ ಹಾಜಿ ಕೆ.ಪಿ.ಇಬ್ರಾಹಿಂ ಅಧ್ಯಕ್ಷತೆ ಯಲ್ಲಿ ಇತ್ತೀಚೆಗೆ ನಡೆದ ಮಹಾಸಭೆಯಲ್ಲಿ ಈ ಆಯ್ಕೆ ಮಾಡಲಾಯಿತು. ಕೋಶಾಧಿಕಾರಿ ಬಾರಕೂರು ಅಮೀರ್ ಬಾಷಾ ವಾರ್ಷಿಕ ವರದಿ ಮಂಡಿಸಿ ದರು. ಕಾರ್ಯದರ್ಶಿ ಫಕೀರ್ ಸುಲ್ತಾನ್ ಲೆಕ್ಕಪತ್ರ ಮಂಡಿಸಿದರು.
ಉಪಾಧ್ಯಕ್ಷರಾಗಿ ಸುಲೈಮಾನಂ ಸಾಹೇಬ್ ಹೇರಾಡಿ, ಕಾರ್ಯದರ್ಶಿಯಾಗಿ ಸುಲ್ತಾನ್ ಪಕೀರ್, ಕೋಶಾಧಿಕಾರಿಯಾಗಿ ಬಾರಕೂರು ಅಮೀರ್ ಬಾಷಾ, ಸದಸ್ಯರುಗಳಾಗಿ ವಜೀರ್ ಜಮಾಲ್, ಅಬ್ದುಲ್ ಮುಬಾರಕ್, ನಜೀರ್ ಹೊಸಾಳ, ಟಿ.ಮುಹಮ್ಮದ್, ಮಯ್ಯದ್ದಿ ಧರ್ಮಸಾಲೆ, ಮುಹಮ್ಮದ್ ಮೋನು, ಕುಂಞಿ ಅಹಮದ್ ಆಯ್ಕೆಯಾಗಿದ್ದಾರೆ.
Next Story





