ವಿದ್ಯುತ್ ಪರಿವರ್ತಕಕ್ಕೆ ಲಾರಿ ಢಿಕ್ಕಿ: ಲಕ್ಷಾಂತರ ರೂ. ನಷ್ಟ
ಕುಂದಾಪುರ, ಅ.11: ಕುಂದಾಪುರ ಬೋರ್ಡ್ ಹೈಸ್ಕೂಲ್ ಬಳಿ ಅ.10 ರಂದು ರಾತ್ರಿ 9:30ರ ಸುಮಾರಿಗೆ ಲಾರಿಯೊಂದು ವಿದ್ಯುತ್ ಪರಿವರ್ತಕ ಕೇಂದ್ರಕ್ಕೆ ಢಿಕ್ಕಿ ಹೊಡೆದ ಪರಿಣಾಮ ಲಕ್ಷಾಂತರ ರೂ. ನಷ್ಟ ಉಂಟಾಗಿರುವ ಬಗ್ಗೆ ವರದಿಯಾಗಿದೆ.
ಕುಂದಾಪುರ ಶಾಸ್ತ್ರಿ ಸರ್ಕಲ್ ಕಡೆಯಿಂದ ಹೊಸ ಬಸ್ ನಿಲ್ದಾಣದ ಕಡೆಗೆ ಹೋಗುತ್ತಿದ್ದ ಲಾರಿಯು ರಸ್ತೆಯ ಬದಿಯ ವಿದ್ಯುತ್ ಪರಿವರ್ತಕ ಕೇಂದ್ರಕ್ಕೆ ಢಿಕ್ಕಿ ಹೊಡೆಯಿತು. ಇದರ ಪರಿಣಾಮ 100ಕೆ.ವಿ.ಎ. ಪರಿವರ್ತಕ ಕೇಂದ್ರದ ಕಲ್ಲು ಹಾಗೂ ಕಟ್ಟೆ, ವಿದ್ಯುತ್ ಪರಿವರ್ತಕ, ಇತರೆ ಸಂಪರ್ಕಿತ ಸಾಮಗ್ರಿಗಳು ಹಾನಿಗೊಂಡಿವೆ. ಇದರಿಂದ ಮೆಸ್ಕಾಂ ಸಂಸ್ಥೆಗೆ 1.5ಲಕ್ಷ ರೂ. ನಷ್ಟ ಉಂಟಾಗಿದೆ ಎಂದು ಮೆಸ್ಕಾಂ ಸಹಾಯಕ ಇಂಜಿನಿಯರ್ ರಾಘವೇಂದ್ರ ಎಂ. ಕುಂದಾಪುರ ಸಂಚಾರ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
Next Story





