ರೆಡ್ ಕ್ರಾಸ್ ಉಡುಪಿ ಜಿಲ್ಲಾ ಘಟಕದ ಮಹಾಸಭೆ
ಉಡುಪಿ, ಅ.11: ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಉಡುಪಿ ಜಿಲ್ಲಾ ಘಟಕದ 15ನೇ ಸರ್ವ ಸದಸ್ಯರ ಮಹಾಸಭೆ ರೆಡ್‌ಕ್ರಾಸ್ ಭವನದ ಹೆನ್ರಿ ಡ್ಯುನಾಂಟ್ ಹಾಲ್‌ನಲ್ಲಿ ಇತ್ತೀಚೆಗೆ ಜರಗಿತು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಉಡುಪಿ ಜಿಪಂ ಮುಖ್ಯ ಕಾರ್ಯ ನಿರ್ವಹಣಾ ಧಿಕಾರಿ ಪ್ರೀತಿ ಗೆಹ್ಲೋಟ್, ರೆಡ್‌ಕ್ರಾಸ್ ಸಂಸ್ಥೆಯ ಉಡುಪಿ ಜಿಲ್ಲಾ ಘಟಕದ ಕಾರ್ಯವನ್ನು ಶ್ಲಾಘಿಸಿದರು.
ಸಭೆಯಲ್ಲಿ ಪೋಷಕ ಸದಸ್ಯರಾದ ಬಸ್ರೂರು ರಾಜೀವ್ ಶೆಟ್ಟಿ, ಕೆ. ರಾಮಚಂದ್ರ ದೇವಾಡಿಗ, ತಲ್ಲೂರು ಶಿವರಾಮ ಶೆಟ್ಟಿ, ಉದಯ ಶೆಟ್ಟಿ ಮುನಿಯಾಲ್, ತಲ್ಲೂರು ರಾಜರಾಮ್ ಶೆಟ್ಟಿ ಮತ್ತು ವಿ.ಜಿ.ಶೆಟ್ಟಿ ಹಾಗೂ ಡಾ.ಲೋಕೇಶ್ ರಾವ್ ಇವರನ್ನು ಸನ್ಮಾನಿಸಲಾಯಿತು.
ಜಿನೇವಾ ಒಪ್ಪಂದ ದಿನಾಚರಣೆಯಂದು ಅತೀ ಹೆಚ್ಚು ನಿಧಿ ಸಂಗ್ರಹಣೆ ಮಾಡಿದ ಅಜ್ಜರಕಾಡು ಡಾ. ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿಗೆ ಪ್ರಥಮ ಬಹುಮಾನವಾಗಿ 15,000 ರೂ., ಮಣಿಪಾಲ ಮಾಧವ ಪೈ ಸ್ಮಾರಕ ಕಾಲೇಜಿಗೆ ದ್ವಿತೀಯ ಬಹುಮಾನ 12,500 ರೂ. ಮತ್ತು ಬಾರ್ಕೂರು ಶ್ರೀಮತಿ ರುಕ್ಮಿಣಿ ಶೆಡ್ತಿ ಮೆಮೋರಿಯಲ್ ನ್ಯಾಶನಲ್ ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ ತೃತೀಯ ಬಹುಮಾನ 10,000 ರೂ. ಮೊತ್ತದ ಚೆಕ್‌ನ್ನು ನೀಡಲಾಯಿತು.
ಸಭಾಪತಿ ಉಮೇಶ್ ಪ್ರಭು ಸ್ವಾಗತಿಸಿ, ಗೌರವ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಕೆ. ವರದಿ ಮತ್ತು ಗೌರವ ಖಜಾಂಜಿ ಟಿ. ಚಂದ್ರಶೇಖರ ಲೆಕ್ಕಪತ್ರಗಳು ಮತ್ತು ಲೆಕ್ಕ ಪರಿಶೋಧನಾ ವರದಿ ಮಂಡಿಸಿದರು.
ನೂತನ ಪದಾಧಿಕಾರಿಗಳು: ಮುಂದಿನ 3 ವರ್ಷಗಳ ಅವಧಿಗೆ ಬಸ್ರೂರು ರಾಜೀವ್ ಶೆಟ್ಟಿ, ಡಾ. ಅಶೋಕ್‌ಕುಮಾರ್ ವೈ.ಜಿ, ಡಾ.ಉಮೇಶ್ ಪ್ರಭು, ವಿ.ಜಿ. ಶೆಟ್ಟಿ, ಟಿ.ಚಂದ್ರಶೇಖರ್, ತಲ್ಲೂರು ಶಿವರಾಮ ಶೆಟ್ಟಿ, ಜಯರಾಮ ಆಚಾರ್ಯ, ಡಾ. ಅರವಿಂದ ನಾಯಕ್ ಅಮ್ಮುಂಜೆ, ಕೆ. ಸನ್ಮತ್ ಹೆಗ್ಡೆ ಮತ್ತು ರಮಾದೇವಿ ಅವರನ್ನೊಳಗೊಂಡ 10 ಮಂದಿ ಆಡಳಿತ ಮಂಡಳಿ ದಸ್ಯರನ್ನು ಆಯ್ಕೆ ಮಾಡಲಾಯಿತು.







