ಶುಗರ್ ಮಿಲ್ಸ್ ಪ್ರಕರಣದಲ್ಲಿ ಶರೀಫ್ ಬಂಧನ
ಲಾಹೋರ್, ಅ. 11: ಪಾಕಿಸ್ತಾನದ ನ್ಯಾಶನಲ್ ಅಕೌಂಟಬಿಲಿಟಿ ಬ್ಯೂರೋ (ಎನ್ಎಬಿ) ಶುಕ್ರವಾರ ಚೌಧರಿ ಶುಗರ್ ಮಿಲ್ಸ್ ಪ್ರಕರಣದಲ್ಲಿ ಮಾಜಿ ಪ್ರಧಾನಿ ನವಾಝ್ ಶರೀಫ್ರನ್ನು ಬಂಧಿಸಿದೆ.
ಶರೀಫ್ ಈಗಾಗಲೇ ಅಲ್-ಅಝೀಝಾ ಸ್ಟೀಲ್ ಮಿಲ್ಸ್ ಪ್ರಕರಣದಲ್ಲಿ ಇಲ್ಲಿನ ಕೋಟ್ ಲಾಖ್ಪತ್ ಜೈಲಿನಲ್ಲಿ ಇದ್ದಾರೆ.
ಎನ್ಎಬಿ ತಂಡವೊಂದು ಶುಕ್ರವಾರ ಅವರನ್ನು ಜೈಲಿನಿಂದ ಇಲ್ಲಿನ ಅಕೌಂಟಬಿಲಿಟಿ ನ್ಯಾಯಾಲಯಕ್ಕೆ ಕರೆತಂದಿತು.
ಪ್ರಕರಣದಲ್ಲಿ ಇನ್ನಷ್ಟು ವಿಚಾರಣೆಗಾಗಿ ಶರೀಫ್ರನ್ನು ತನ್ನ ವಶಕ್ಕೆ ಒಪ್ಪಿಸಬೇಕು ಎಂದು ನ್ಯಾಯಾಲಯದಲ್ಲಿ ಎನ್ಎಬಿ ಮನವಿ ಮಾಡಿತು. ನ್ಯಾಯಾಲಯವು ಶರೀಫ್ರನ್ನು 14 ದಿನಗಳ ಕಾಲ ಎನ್ಎಬಿ ವಶಕ್ಕೆ ನೀಡಿತು.
Next Story