ಬಾಹ್ಯಾಕಾಶದಲ್ಲಿ ಮೊದಲು ನಡೆದ ಸೋವಿಯತ್ ಖಗೋಳಯಾನಿ ಇನ್ನಿಲ್ಲ
ಮಾಸ್ಕೋ, ಅ. 11: 1965ರಲ್ಲಿ ಮೊದಲ ಬಾಹ್ಯಾಕಾಶ ನಡಿಗೆ ಮಾಡಿದ್ದ ಸೋವಿಯತ್ ಯುಗದ ಖಗೋಳಯಾನಿ ಅಲೆಕ್ಸೀ ಲಿಯೊನೊವ್ ಶುಕ್ರವಾರ ರಶ್ಯ ರಾಜಧಾನಿ ಮಾಸ್ಕೋದಲ್ಲಿ ನಿಧನರಾದರು. ಅವರಿಗೆ 85 ವರ್ಷ ವಯಸ್ಸಾಗಿತ್ತು. ಅವರು ಸುದೀರ್ಘ ಅವಧಿಯಿಂದ ಕಾಯಿಲೆಯಿಂದ ಬಳಲುತ್ತಿದ್ದರು.
ಅವರಿಗೆ ದೇಶದ ಅತ್ಯುನ್ನತ ಗೌರವವಾದ ‘ಹೀರೋ ಆಫ್ ದ ಸೋವಿಯತ್ ಯೂನಿಯನ್’ ಪ್ರಶಸ್ತಿಯನ್ನು ಎರಡು ಬಾರಿ ನೀಡಲಾಗಿತ್ತು.
ಲಿಯೊನೊವ್, 1961ರಲ್ಲಿ ಬಾಹ್ಯಾಕಾಶಕ್ಕೆ ಪ್ರವಾಸ ಕೈಗೊಂಡ ಮೊದಲ ಮಾನವ ಯೂರಿ ಗ್ಯಾಗರಿನ್ರ ಆತ್ಮೀಯ ಮಿತ್ರನಾಗಿದ್ದರು.
ಲಿಯೊನೊವ್ ಮತ್ತು ಗ್ಯಾಗರಿನ್ ಜೊತೆಯಾಗಿ ತರಬೇತಿ ಪಡೆದರು. ಮೊದಲ ಬಾಹ್ಯಾಕಾಶ ನಡಿಗೆ ಮಾಡಲು ಲಿಯೊನೊವ್ರನ್ನು ಆಯ್ಕೆ ಮಾಡಲಾಗಿತ್ತು.
Next Story