ಬಿ.ಸಿ.ರೋಡ್: ಎಸ್‍ಬಿಎಸ್ ಜಿಲ್ಲಾ ಪ್ರತಿನಿಧಿಗಳ ಸಮಾವೇಶ-ಬಾಲ ಸಂಚಯ ರ್ಯಾಲಿ

ಬಂಟ್ವಾಳ, ಅ. 12: ಎಸ್‍ಜೆಎಂ ದ.ಕ. ಜಿಲ್ಲೆಯ ಪಶ್ಚಿಮ ವಿಭಾಗದ ಎಸ್‍ಬಿಎಸ್ ಜಿಲ್ಲಾ ಪ್ರತಿನಿಧಿಗಳ ಸಮಾವೇಶ ಹಾಗೂ ಬಾಲ ಸಂಚಯ ರ್ಯಾಲಿ ಕಾರ್ಯಕ್ರಮ ಬಿ.ಸಿ.ರೋಡಿನ ಸ್ಪರ್ಶಾ ಕಲಾಮಂದಿರದಲ್ಲಿ ಶನಿವಾರ ನಡೆಯಿತು.
ಸೈಯದ್ ಮುಷ್ತಾಕ್ ತಂಙಳ್ ಚಟ್ಟೆಕ್ಕಲ್ ದುಆಃ ನೆರವೇರಿಸಿದರು. ಮುಹಮ್ಮದ್ ಮಾಸ್ಟರ್ ತುಂಬೆ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಎಸ್‍ಜೆಎಂ ದ.ಕ. ಜಿಲ್ಲೆ ವೆಸ್ಟ್‍ನ ಅಧ್ಯಕ್ಷ ಪಿ.ಎಂ. ಮುಹಮ್ಮದ್ ಮದನಿ ಕೆ.ಸಿ.ರೋಡ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಎಸ್‍ಇಡಿಸಿ ರಾಜ್ಯಾಧ್ಯಕ್ಷ ಕೆ.ಕೆ.ಎಂ ಕಾಮಿಲ್ ಸಖಾಫಿ, ಎಸ್ಸೆಸ್ಸೆಫ್ ದ.ಕ. ಜಿಲ್ಲಾಧ್ಯಕ್ಷ ಇಬ್ರಾಹಿಂ ಸಖಾಫಿ ಸೆರ್ಕಳ, ಎಸ್‍ಎಂಎ ದ.ಕ. ಜಿಲ್ಲೆ ವೆಸ್ಟ್‍ನ ಅಧ್ಯಕ್ಷ ಬಿ.ಎ. ಇಕ್ಬಾಲ್ ಕೃಷ್ಣಾಪುರ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಾರ್ಕಳದ ತ್ವೈಬಾ ಗಾರ್ಡನ್‍ನ ಪ್ರಾಂಶುಪಾಲ ಮುಹಮ್ಮದ್ ಶರೀಫ್ ಸಅದಿ ಕಿಲ್ಲೂರು ಹಾಗೂ ರಾಜ್ಯ ಹಜ್ ಸಮಿತಿ ಸದಸ್ಯ ಕೆ.ಎಂ. ಸಿದ್ದೀಕ್ ಮೋಂಟುಗೋಳಿ ಅವರು ಸಮಾವೇಶದ ವಿಷಯ ಮಂಡಿಸಿದರು.
ಈ ಸಂದರ್ಭದಲ್ಲಿ ಎಸ್‍ಜೆಎಂ ಬಂಟ್ವಾಳ ರೇಂಜ್ ಅದ್ಯಕ್ಷ ರಫೀಕ್ ಸಅದಿ ಪೇರಿಮಾರ್, ಸಜಿಪ ರೇಂಜ್‍ನ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್ ಸಖಾಫಿ ಕೌಡೇಲು, ಎಸ್‍ಜೆಎಂ ದ.ಕ. ಜಿಲ್ಲೆ ವೆಸ್ಟ್‍ನ ಕಾರ್ಯದರ್ಶಿಗಳಾದ ಹೈದರ್ ಅಶ್ರಫಿ, ಅಶ್ರಫ್ ಇಮ್ದಾದಿ ಬಾಳೆಪುಣಿ, ಎಸ್‍ಜೆಎಂನ ಪದಾಧಿಕಾರಿಗಳಾದ ಹನೀಫ್ ಮುಸ್ಲಿಯಾರ್, ಇಸ್ಮಾಯಿಲ್ ಸಅದಿ ಉರುಮಣೆ, ಒ.ಕೆ. ಸಈದ್ ಮುಸ್ಲಿಯಾರ್, ಯಾಕೂಬ್ ಲತೀಫಿ ಅಮ್ಟೂರು, ಮುಹಿಯುದ್ದೀನ್ ಸಅದಿ ತೋಟಾಲ್, ಎಸ್‍ಬಿಎಸ್‍ನ ಬಿ. ಮುಹಮ್ಮದ್ ಜಝೀಲ್, ಮುಹಮ್ಮದ್ ಮಾಝೀನ್ ಹಾಜರಿದ್ದರು.
ಸಮಾವೇಶದಲ್ಲಿ 17 ರೇಂಜ್‍ನ ಸುಮಾರು 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಸಭಾ ಕಾರ್ಯಕ್ರಮದ ಬಳಿಕ ಬಿ.ಸಿ.ರೋಡ್ ವೃತ್ತದಿಂದ ಆರಂಭವಾದ ಬಾಲ ಸಂಚಯ ರ್ಯಾಲಿಯು ಮಿನಿವಿಧಾನ ಸೌಧದ ಮುಂಭಾಗ ಸಮಾಪ್ತಿಗೊಂಡಿತು. ಈ ಸಂದರ್ಭದಲ್ಲಿ ವಿದ್ಯಾರ್ಥಿ ನಾಯಕ ಮೆಹರೂಫ್ ಅವರು ದಿಕ್ಸೂಚಿ ಭಾಷಣ ಮಾಡಿದರು.
ಎಸ್‍ಜೆಎಂ ದ.ಕ. ಜಿಲ್ಲೆ ವೆಸ್ಟ್ ಇದರ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಝೀಝ್ ನೂರಾನಿ ಸ್ವಾಗತಿಸಿದರು. ಎಸ್‍ಜೆಎಂ ದ.ಕ. ಜಿಲ್ಲೆ ವೆಸ್ಟ್ ಕಾರ್ಯದರ್ಶಿಗಳಾದ ಅಬೂಬಕರ್ ಮುಸ್ಲಿಯಾರ್ ಕುಕ್ಕಾಜೆ ವಂದಿಸಿ, ಇಬ್ರಾಹಿಂ ಖಲೀಲ್ ಮುಸ್ಲಿಯಾರ್ ನಿರೂಪಿಸಿದರು.
.jpg)







