ವಿಶ್ವಸಂಸ್ಥೆಯಲ್ಲಿ ಸ್ಥಗಿತಗೊಂಡ ಎಸ್ಕಲೇಟರ್‌ಗಳು, ಹೀಟರ್‌ಗಳು
ಕಾರಣವೇನು ಗೊತ್ತಾ ?
ವಿಶ್ವಸಂಸ್ಥೆ, ಅ. 12: ವಿಶ್ವಸಂಸ್ಥೆ ಎದುರಿಸುತ್ತಿರುವ ಆರ್ಥಿಕ ಬಿಕ್ಕಟ್ಟಿನ ಪರಿಣಾಮಗಳು ಶುಕ್ರವಾರ ಎಲ್ಲರಿಗೂ ಕಾಣುವಂತೆ ಗೋಚರಿಸಿವೆ. ಎಸ್ಕಲೇಟರ್ (ಲಿಫ್ಟ್)ಗಳು ನಿಂತಿವೆ, ಉಷ್ಣತೆಯನ್ನು ಕಾಯ್ದುಕೊಳ್ಳುವ ಸಲಕರಣೆಗಳ (ಹೀಟರ್)ನ್ನು ಬಂದ್ ಮಾಡಲಾಗಿದೆ ಹಾಗೂ ರಾಜತಾಂತ್ರಿಕರ ಬಾರನ್ನು ಸಂಜೆ 5 ಗಂಟೆಗೇ ಮುಚ್ಚಲಾಗಿದೆ.
‘‘ನಮಗೆ ಬೇರೆ ಆಯ್ಕೆಯೇ ಇಲ್ಲ’’ ಎಂದು ವಿಶ್ವಸಂಸ್ಥೆಯ ನಿರ್ವಹಣಾ ಇಲಾಖೆಯ ಹಿರಿಯ ಅಧಿಕಾರಿ ಕ್ಯಾಥರೀನ್ ಪೊಲಾರ್ಡ್ ಹೇಳುತ್ತಾರೆ.
ನಮ್ಮ ಈಗಿನ ಪ್ರಮುಖ ಆದ್ಯತೆ ವಿಶ್ವಸಂಸ್ಥೆಯ 37,000 ಉದ್ಯೋಗಿಗಳಿಗೆ ಮುಂದಿನ ವೇತನ ಲಭಿಸುವಂತೆ ನೋಡಿಕೊಳ್ಳುವುದಾಗಿದೆ ಎಂದು ಅವರು ನುಡಿದರು.
Next Story