ಕೆಡುಕಿನ ವಿರುದ್ಧ, ಒಳಿತಿನ ಜಾಗೃತಿಗೆ ಮೊಹಲ್ಲಾ ಸಶಕ್ತೀಕರಣ ಅಗತ್ಯ. : ಖಾಝಿ ತ್ವಾಖಾ ಉಸ್ತಾದ್

ವಿಟ್ಲ : ಕೆಡುಕಿನ ವಿರುದ್ಧ ಮತ್ತು ಒಳಿತಿನ ಜಾಗೃತಿ ಮೂಡಿಸಿ ಮಾದರಿ ಸಮಾಜ ಕಟ್ಟುವ ಕೆಲಸ ನಡೆಯಬೇಕಿದೆ. ಇದಕ್ಕಾಗಿ ಮೊಹಲ್ಲಾಗಳನ್ನು ಏಕೀಕರಿಸಿ ಇನ್ನಷ್ಟು ಸಶಕ್ತೀಕರಣ ಗೊಳಿಸುವುದು ಕಾಲದ ಬೇಡಿಕೆಯಾಗಿದೆ ಎಂದು ದ.ಕ.ಜಿಲ್ಲಾ ಖಾಝಿ ಶೈಖುನಾ ತ್ವಾಖಾ ಉಸ್ತಾದ್ ಹೇಳಿದರು.
ಅವರು ರವಿವಾರ ಪಾಣೆಮಂಗಳೂರಿನ ಸಾಗರ್ ಹಾಲ್ ನಲ್ಲಿ ನಡೆದ ಸುನ್ನಿ ಮಹಲ್ ಫೆಡರೇಶನ್ ಬಂಟ್ವಾಳ ತಾಲೂಕು ಘಟಕದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಮುಸ್ಲಿಮರು ಧರ್ಮದ ಆಚಾರ, ವಿಚಾರ, ಸಂಸ್ಕಾರ, ಸಂಸ್ಕೃತಿಗಳನ್ನು ಅಳವಡಿಸಿ ನೈಜ ಅಹ್ಲ್ ಸುನ್ನತ್ ವಲ್ ಜಮಾಅತ್ ನ ತತ್ವಾದರ್ಶಗಳನ್ನು ಮೈಗೂಡಿಸಿಕೊಂಡು ಮಾದರಿ ಸಮಾಜವಾಗಿ ಬದುಕಬೇಕು ಎಂದ ಅವರು ಮೊಹಲ್ಲಾಗಳನ್ನು ಏಕೀಕರಿಸಿ ತಳಮಟ್ಟದಲ್ಲೇ ಸಮಾಜವನ್ನು ಧರ್ಮದ ನೆಲೆಗಟ್ಟಿನಲ್ಲಿ ಸದೃಢವಾಗಿ ಕಟ್ಟುವ ಧ್ಯೇಯದಲ್ಲಿ ಪ್ರತಿಷ್ಠಿತ ಉಲಮಾ ಸಂಘಟನೆಯಾದ "ಸಮಸ್ತ" ದ ಅಧೀನದಲ್ಲಿ ವಿಶ್ವೋತ್ತರ ವಿದ್ವಾಂಸ ಶೈಖುನಾ ಶಂಸುಲ್ ಉಲಮಾರಂತಹ ಮಹಾನ್ ನಾಯಕರ ನೇತೃತ್ವದಲ್ಲಿ ರೂಪುಗೊಂಡ ಸಂಘಟನೆಯಾಗಿದೆ ಸುನ್ನಿ ಮಹಲ್ ಫೆಡರೇಶನ್. ಈ ಸಂಘಟನೆಯ ಮೂಲಕ ಕರ್ನಾಟಕದಲ್ಲಿ ಮೊಹಲ್ಲಾ ಜಮಾಅತ್ ಗಳ ಏಕೀಕರಣ ನಡೆಸಲಾಗುವುದು ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಮಂಗಳೂರು ಕೇಂದ್ರ ಜುಮ್ಮಾ ಮಸೀದಿಯ ಖತೀಬ್ ಸದಖತುಲ್ಲಾ ಫೈಝಿ ಮಾತನಾಡಿ ಎಸ್.ಎಂ.ಎಫ್.ನ ಧ್ಯೇಯೋದ್ದೇಶಗಳನ್ನು ವಿವರಿಸಿದರು.
ಸಮಾರಂಭದಲ್ಲಿ ಇರ್ಶಾದ್ ದಾರಿಮಿ ಮಿತ್ತಬೈಲು, ಖಲೀಲುರ್ರಹ್ಮಾನ್ ದಾರಿಮಿ, ಅಬ್ದುಲ್ ರಹಿಮಾನ್ ಫೈಝಿ, ಅಬ್ದುಲ್ ಮಜೀದ್ ಫೈಝಿ ನಂದಾವರ, ಅಬ್ದುಲ್ ರಹಿಮಾನ್ ಫೈಝಿ ಪರ್ತಿಪ್ಪಾಡಿ, ಇಬ್ರಾಹಿಂ ದಾರಿಮಿ, ಕೆ.ಕೆ.ಸುಲೈಮಾನ್ ಫೈಝಿ ಕನ್ಯಾನ, ಅಶ್ರಫ್ ಫೈಝಿ ಮಿತ್ತಬೈಲು, ಮಾಹಿನ್ ದಾರಿಮಿ ಪಾತೂರು, ಉಸ್ಮಾನ್ ದಾರಿಮಿ, ಅಬ್ದುಲ್ ಲತೀಫ್ ಹನೀಫಿ, ಅಬ್ಬಾಸ್ ದಾರಿಮಿ , ದಾರಿಮೀಸ್ ಎಸೋಸಿಯೇಶನ್ ದ.ಕ.ಜಿಲ್ಲಾದ್ಯಕ್ಷ ಕೆ.ಬಿ.ದಾರಿಮಿ, ಸಮಸ್ತ ಹನೀಫೀ ಉಲಮಾ ಒಕ್ಕೂಟದ ರಾಜ್ಯಾಧ್ಯಕ್ಷ ಕೆ.ಎಂ.ಎ.ಕೊಡುಂಗಾಯಿ, ಎಸ್.ಎಂ.ಎಫ್ ಜಿಲ್ಲಾ ಕೋಶಾಧಿಕಾರಿ ಅಬ್ದುಲ್ ರಝಾಕ್ ಹಾಜಿ ಬಿ.ಸಿ.ರೋಡ್, ಸಮಸ್ತ ವಿದ್ಯಾಭ್ಯಾಸ ಬೋರ್ಡ್ ಸದಸ್ಯ ಅಬ್ದುಲ್ ರಶೀದ್ ಹಾಜಿ ಪರ್ಲಡ್ಕ, ಮದ್ರಸ ಮೆನೇಜ್ ಮೆಂಟ್ ದ.ಕ.ಜಿಲ್ಲಾ ಕಾರ್ಯದರ್ಶಿ ಎಸ್.ಎಂ.ರಫೀಕ್ ಹಾಜಿ ನೇರಳಕಟ್ಟೆ , ವರ್ಕಿಂಗ್ ಸೆಕ್ರೇಟರಿ ಹಕೀಂ ಪರ್ತಿಪ್ಪಾಡಿ, ಶರೀಫ್ ಮೂಸ ಕುದ್ದುಪದವು, ಎಂ.ಎಸ್. ಹಮೀದ್ ಪುಣಚ, ರಿಯಾಝುದ್ದೀನ್ ಹಾಜಿ ಮಂಗಳೂರು, ನೌಶಾದ್ ಹಾಜಿ ಸುರಲ್ಪಾಡಿ, ಪಿ.ಎಸ್.ಅಬ್ದುಲ್ ಹಮೀದ್ ಹಾಜಿ ನೆಹರುನಗರ, ಫಝಲುರ್ರಹ್ಮಾನ್ ಮುಸ್ಲಿಯಾರ್ ಮೊದಲಾದವರು ಉಪಸ್ಥಿತರಿದ್ದರು.
ತಬೂಕ್ ದಾರಿಮಿ ಪ್ರಸ್ತಾವನೆಗೈದರು. ಎಸ್.ಎಂ.ಎಫ್ ಜಿಲ್ಲಾ ಕಾರ್ಯದರ್ಶಿ ಹನೀಫ್ ಹಾಜಿ ಮಂಗಳೂರು ಸ್ವಾಗತಿಸಿ, ವಂದಿಸಿದರು













