ಪಿ.ಎಫ್.ಐ. ಬಜ್ಪೆ ಡಿವಿಷನ್ ವತಿಯಿಂದ ಮ್ಯಾರಥಾನ್, ಯೋಗ ಪ್ರದರ್ಶನ

ಮಂಗಳೂರು : ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಬಜ್ಪೆ ಡಿವಿಷನ್ ವತಿಯಿಂದ "ಜನಾರೋಗ್ಯವೇ ರಾಷ್ಟ್ರ ಶಕ್ತಿ" ರಾಷ್ಟ್ರೀಯ ಅಭಿಯಾನ ಜೋಕಟ್ಟೆಯಲ್ಲಿ ನಡೆಯಿತು.
ಜೋಕಟ್ಟೆ ಕೆಬಿಎಸ್ ಜಂಕ್ಷನ್ನಿಂದ ಜೋಕಟ್ಟೆ ಶಾಲಾ ಮೈದಾನದವರೆಗೆ ನಡೆದ ಮ್ಯಾರಥಾನ್ ಗೆ ರಾಜ್ಯ ಸಮಿತಿ ಸದಸ್ಯರಾದ ಏ.ಕೆ. ಆಶ್ರಫ್ ಜೋಕಟ್ಟೆ ಚಾಲನೆ ನೀಡಿದರು. ಜಿಲ್ಲಾ ನಾಯಕರಾದ ರಫೀಕ್ ಜೋಕಟ್ಟೆ ಪ್ರಾಸ್ತಾವಿಕವಾಗಿ ಮಾತನಾಡಿದರು. ನಂತರ ಜೋಕಟ್ಟೆ ಶಾಲಾ ಮೈದಾನದಲ್ಲಿ ಯೋಗ ಪ್ರದರ್ಶನ, ಆತ್ಮ ರಕ್ಷಣೆ ಕಲೆ ಪ್ರದರ್ಶನ, ದೈಹಿಕ ಕಲೆ ಪ್ರದರ್ಶನ ಹಾಗೂ ಕ್ರಿಡಾಕೂಟ ನಡೆಯಿತು.
ಬಜ್ಪೆ ಡಿವಿಷನ್ ಅಧ್ಯಕ್ಷರಾದ ನವಾಝ್ ಕಾವೂರು ಸಮಾರೋಪ ಭಾಷಣ ಮಾಡಿದರು. ಕಾರ್ಯಕ್ರಮದಲ್ಲಿ ಎಸ್ಡಿಪಿಐ ಜಿಲ್ಲಾ ಅಧ್ಯಕ್ಷ ಅಥಾವುಲ್ಲಾ ಜೋಕಟ್ಟೆ, ಪಿ.ಎಫ್.ಐ. ಜಿಲ್ಲಾ ಕಾರ್ಯದರ್ಶಿ ರಿಯಾಝ್ ಬಜ್ಪೆ, ಜಿಲ್ಲಾ ಸಮಿತಿ ಸದಸ್ಯರಾದ ಇಮ್ರಾಝ್ ಪೊರ್ಕೋಡಿ, ಇಲ್ಯಾಸ್ ಬಜ್ಪೆ, ಬಜ್ಪೆ ಡಿವಿಷನ್ ಕಾರ್ಯದರ್ಶಿ ಸಮೀರ್ ಅಂಗರಗುಂಡಿ, ಜೋಕಟ್ಟೆ ಏರಿಯಾ ಅಧ್ಯಕ್ಷರಾದ ಝುಬೈರ್ ಜೋಕಟ್ಟೆ, ಬಜ್ಪೆ ಡಿವಿಷನ್ ನಾಯಕರು ಉಪಸ್ಥಿತಿತರಿದ್ದರು.












