ಚಾಮರಾಜನಗರ, ಅ.14: ಜಿಲ್ಲೆಯ ಹಳ್ಳಿಕೆರೆಹುಂಡಿ ಗ್ರಾಮದಲ್ಲಿ ಹಸುವೊಂದು ಎರಡು ತಲೆಯ ಕರುವಿಗೆ ಜನ್ಮ ನೀಡಿದ ಘಟನೆ ನಡೆದಿದೆ.
ಇಂದು ಬೆಳಗ್ಗೆ ರವಿ ಎಂಬವರ ಮನೆಯಲ್ಲಿ ಎರಡು ತಲೆಯ ಕರು ಜನಿಸಿದ್ದು, ಕರುವಿಗೆ 4 ಕಣ್ಣು, 2 ಕಿವಿ, 2 ಬಾಯಿ ಇದೆ.
ಸ್ಥಳಕ್ಕೆ ಪಶು ವೈದ್ಯಾಧಿಕಾರಿ ಡಾ.ಸುಕಂದರಾಜು ಭೇಟೆ ನೀಡಿ ಪರಿಶೀಲನೆ ನಡೆಸಿದರು.