ನೀರಿನಲ್ಲಿ ಮುಳುಗಿ ಮಕ್ಕಳು ಸಾವು ಪ್ರಕರಣ: 5 ಲಕ್ಷ ರೂ. ಪರಿಹಾರದ ಭರವಸೆ ನೀಡಿದ ಶಾಸಕ ನರೇಂದ್ರ

ಹನೂರು: ಕ್ಷೇತ್ರ ವ್ಯಾಪ್ತಿಯ ಪೊನ್ನಾಚಿ ಹಾಗೂ ಮರೂರು ಗ್ರಾಮದ ಬಳಿ ಬರುವ ರಾಮೇಗೌಡನ ಹಳ್ಳಿ ಗ್ರಾಮದ ಮಕ್ಕಳು ನೀರಿನಲ್ಲಿ ಮುಳುಗಿ ಮೃತಪಟ್ಟ ಕುಟುಂಬಗಳಿಗೆ ತಲಾ 5 ಲಕ್ಷ ರೂ. ಪರಿಹಾರವನ್ನು ವಿತರಿಸುವುದಾಗಿ ಶಾಸಕ ಆರ್.ನರೇಂದ್ರ ಭರವಸೆ ನೀಡಿದರು.
ನಿನ್ನೆ ರಾಮೇಗೌಡನ ಹಳ್ಳಿಯ ಶಿವಣ್ಣ-ಜಯಮ್ಮ ದಂಪತಿ ಮಕ್ಕಳಾದ ನಿಖಿತ (6) ಹಾಗೂ ಅನುಪಮ (5) ಬಸವರಾಜು- ಶಿವಮ್ಮ ನವರ ಪುತ್ರಿ ಪ್ರಣೀತ (5) ಹಳ್ಳದ ನೀರಿನಲ್ಲಿ ಕೊಚ್ಚಿ ಹೋಗಿ ಸಾವನ್ನಪ್ಪಿದ್ದರು.
ಈ ಹಿನ್ನೆಲೆ ಇಂದು ಬೆಳಗ್ಗೆ ಮೃತ ಮಕ್ಕಳ ಅಂತಿಮ ದರ್ಶನವನ್ನು ಪಡೆದ ಶಾಸಕರು 5 ಲಕ್ಷ ಪರಿಹಾರದ ಭರವಸೆ ಜೊತೆಗೆ ತಮ್ಮ ವೈಯಕ್ತಿಕ ಧನ ಸಹಾಯ ಮಾಡಿ ಮೃತಪಟ್ಟ ಮಕ್ಕಳ ಪೋಷಕರಿಗೆ ಹಾಗೂ ಸಂಬಂಧಿಕರಿಗೆ ಸಾಂತ್ವಾನ ಹೇಳಿದರು.
ಈ ವೇಳೆ ಗ್ರಾಮದಲ್ಲೇ ಮರಣೋತ್ತರ ಪರೀಕ್ಷೆಯನ್ನು ನಡೆಸಲು ವೈದ್ಯಾಧಿಕಾರಿಗಳಿಗೆ ಸೂಚಿಸದ ಅವರು ಪೊಲೀಸರು ಮುಂದಿನ ಕ್ರಮ ಕೈಗೊಳ್ಳುವಂತೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಎ.ಹೆಚ್.ನಾಗರಾಜು, ಪರಿಶಿಷ್ಟ ಪಂಗಡದ ಕಲ್ಯಾಣಾಧಿಕಾರಿ ಗಂಗಾಧರ್, ವೈದ್ಯಾಧಿಕಾರಿ ಮುಕುಂದ, ಪೊಲೀಸ್ ಇನ್ಸ್ ಪೆಕ್ಟರ್ ಮಹೇಶ್, ಮುಖಂಡರಾದ ಈಶ್ವರ್ ಸೇರಿ ಇನ್ನಿತರರು ಹಾಜರಿದ್ದರು.





