ಕಾಪು: ರಸ್ತೆ ಬದಿ ಸಿಕ್ಕಿದ ಮೊಬೈಲ್ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ರಿಕ್ಷಾ ಚಾಲಕ

ಕಾಪು, ಅ.14: ನಗರದ ಕೆ.ಎಂ.ಮಾರ್ಗದಲ್ಲಿ ಇಂದು ಬೆಳಗ್ಗೆ ಕಾಪುವಿನ ರಿಕ್ಷಾ ಚಾಲಕರೊಬ್ಬರಿಗೆ ದೊರೆತ ದುಬಾರಿ ಬೆಲೆಯ ಮೊಬೈಲ್ ಫೋನ್‌ನ್ನು ವಾರೀಸುದಾರರಿಗೆ ನೀಡುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ.
ಕಾಪುವಿನ ರಿಕ್ಷಾ ಚಾಲಕ ಹಾಗೂ ಖುವ್ವತುಲ್ ಇಸ್ಲಾಂ ಯಂಗ್ ಮೆನ್ಸ್ ಸದಸ್ಯ ಮುಹಮ್ಮದ್ ಕಾಪು ತನ್ನ ರಿಕ್ಷಾದಲ್ಲಿ ಉಡುಪಿಗೆ ಬಂದಿದ್ದ ವೇಳೆ ಬೆಳಗ್ಗೆ 11ಗಂಟೆ ಸುಮಾರಿಗೆ ಕೆಎಂ ಮಾರ್ಗದ ಅಂತೋನಿ ಸೈಕಲ್ ಶಾಪ್‌ನ ಎದುರುಗಡೆ 22,000 ರೂ. ಮೌಲ್ಯದ ಮೊಬೈಲ್ ಪತ್ತೆಯಾಗಿತ್ತು.
ವಾರಸುದಾರರಿಲ್ಲದ ಈ ಮೊಬೈಲ್ ಅನ್ನು ಮುಹಮ್ಮದ್ ಸ್ವಿಚ್ ಆಫ್ ಮಾಡದೆ ತನ್ನ ಬಳಿ ಇರಿಸಿದ್ದರು. ಬಳಿಕ ಆ ಮೊಬೈಲ್ ಬಂದ ಕರೆಯ ಮೂಲಕವೇ ವಾರಸುದಾರರಾದ ಬ್ರಹ್ಮಾವರದ ಎರಿಕ್ ಎಂಬವರನ್ನು ಪತ್ತೆ ಹಚ್ಚಲಾಯಿತು. ಮಧ್ಯಾಹ್ನ ಮೂರು ಗಂಟೆ ಸುಮಾರಿಗೆ ಮೊಬೈಲ್‌ನ್ನು ಕಾಪು ಪೊಲೀಸ್ ಠಾಣೆಯಲ್ಲಿ ಎರಿಕ್ ಅವರಿಗೆ ಹಸ್ತಾಂತರ ಮಾಡ ಲಾಯಿತು.
Next Story





