ಬಾಲಕಿ ನಾಪತ್ತೆ
ಮಂಗಳೂರು, ಅ.14: ಕೊಣಾಜೆ-ಮುಡಿಪು ಸಮೀಪದ ಪಜೀರ್ ಗ್ರಾಮದ ಕಂಬ್ಲಪದವು ನಿವಾಸಿ ಫ್ರಾನ್ಸಿಸ್ ಕುಟಿನೋರ ಪುತ್ರಿ ಫಿಯೋನಾ ಸ್ವೀಡಲ್ ಕುಟಿನೊ (16) ಎಂಬಾಕೆ ಅ.8ರಿಂದ ಕಾಣೆಯಾದ ಬಗ್ಗೆ ಕೊಣಾಜೆ ಠಾಣೆಯಲ್ಲಿ ದೂರು ದಾಖಲಾಗಿದೆ.
ಮಂಗಳೂರಿಗೆ ಹೋಗಿ ಬರುತ್ತೇನೆಂದು ಹೋದ ಈಕೆ ಮರಳಿ ತನ್ನ ಮನೆಗೆ ಬಂದಿಲ್ಲ ಎನ್ನಲಾಗಿದೆ. 4.5 ಅಡಿ ಎತ್ತರದ, ಗೋಧಿ ಮೈಬಣ್ಣದ, ದುಂಡು ಮುಖದ, ಸಾಧಾರಣ ಮೈಕಟ್ಟಿನ, ಕನ್ನಡ, ತುಳು, ಕೊಂಕಣಿ, ಇಂಗ್ಲಿಷ್ ಮಾತಾನಾಡುವ ಈಕೆಯ ಬಗ್ಗೆ ಮಾಹಿತಿ ದೊರಕಿದ್ದಲ್ಲಿ ಕೊಣಾಜೆ ಪೊಲೀಸ್ ಠಾಣೆ (ದೂ.ಸಂ: 0824-2220536, 9480802350, 0824-2220800)ಯನ್ನು ಸಂಪರ್ಕಿಸಲು ಪ್ರಕಟನೆ ತಿಳಿಸಿದೆ.
Next Story





