Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಆರೋಗ್ಯ
  4. ಹಲ್ಲುಗಳ ಆರೋಗ್ಯದ ಕುರಿತು ಈ...

ಹಲ್ಲುಗಳ ಆರೋಗ್ಯದ ಕುರಿತು ಈ ತಪ್ಪುಗ್ರಹಿಕೆಗಳು ನಿಮ್ಮಲ್ಲಿಯೂ ಇರಬಹುದು

ವಾರ್ತಾಭಾರತಿವಾರ್ತಾಭಾರತಿ16 Oct 2019 7:33 PM IST
share
ಹಲ್ಲುಗಳ ಆರೋಗ್ಯದ ಕುರಿತು ಈ ತಪ್ಪುಗ್ರಹಿಕೆಗಳು ನಿಮ್ಮಲ್ಲಿಯೂ ಇರಬಹುದು

ಹಲ್ಲುಗಳ ಆರೋಗ್ಯದ ಕುರಿತು ಹಲವಾರು ಮಿಥ್ಯೆಗಳು ಚಾಲ್ತಿಯಲ್ಲಿದ್ದು,ಹೆಚ್ಚಿನವರು ಅವುಗಳನ್ನು ನಿಜವೆಂದೇ ನಂಬಿದ್ದಾರೆ. ಆದರೆ ಇವೆಲ್ಲ ಯಾವುದೇ ಆಧಾರವಿಲ್ಲದ ತಪ್ಪು ಮಾಹಿತಿಗಳಾಗಿದ್ದು,ವಿಜ್ಞಾನವೂ ಇವುಗಳನ್ನು ಬೆಂಬಲಿಸುತ್ತಿಲ್ಲ. ಇಂತಹ ಮಿಥ್ಯೆಗಳನ್ನು ನಂಬುತ್ತಿದ್ದರೆ ಅದರಿಂದ ನಮ್ಮ ಆರೋಗ್ಯಕ್ಕೆ ಹಾನಿಯುಂಟಾಗುತ್ತದೆಯೇ ಹೊರತು ಯಾವುದೇ ಲಾಭವಿಲ್ಲ. ಅಂತಹ ಕೆಲವು ಸಾಮಾನ್ಯ ಮಿಥ್ಯೆಗಳು ಇಲ್ಲಿವೆ......

►ಡೆಂಟಲ್ ಕ್ಲೀನಿಂಗ್ ಹಲ್ಲುಗಳ ಸಂವೇದನಾಶೀಲತೆಯನ್ನು ಹೆಚ್ಚಿಸುತ್ತದೆ

  -ದಂತವೈದ್ಯರಿಂದ ಡೆಂಟಲ್ ಕ್ಲೀನಿಂಗ್ ಅಥವಾ ಹಲ್ಲುಗಳನ್ನು ಸ್ವಚ್ಛಗೊಳಿಸಿಕೊಳ್ಳುವುದರಲ್ಲಿ ಯಾವುದೇ ಆಪತ್ತು ಇಲ್ಲ. ಈ ಪ್ರಕ್ರಿಯೆಯಲ್ಲಿ ಹಲ್ಲುಗಳ ಹೊರಗಿನ ಹೊದಿಕೆ ಅಥವಾ ದಂತಕವಚವನ್ನು ಮಾತ್ರ ಸ್ವಚ್ಛಗೊಳಿಸಲಾಗುತ್ತದೆ. ಇದು ಹಲ್ಲುಗಳಿಗೆ ಹಾನಿಯನ್ನಂಟು ಮಾಡುವ ಪಾಚಿಯನ್ನು ನಿವಾರಿಸುತ್ತದೆ. ಕ್ಲೀನಿಂಗ್ ಪ್ರಕ್ರಿಯೆಯಲ್ಲಿ ಕಿಟ್ಟವನ್ನು ಮಾತ್ರ ತೆಗೆಯಲಾಗುತ್ತದೆ ಮತ್ತು ಇದಕ್ಕೂ ಹಲ್ಲುಗಳ ಸಂವೇದನಾಶೀಲತೆಗೂ ಯಾವುದೇ ಸಂಬಂಧವಿಲ್ಲ.

►ಗಟ್ಟಿಯಾಗಿ ಉಜ್ಜಿಕೊಳ್ಳುವುದರಿಂದ ಹಲ್ಲುಗಳು ಹೆಚ್ಚು ಸ್ವಚ್ಛವಾಗುತ್ತವೆ

ಹಲ್ಲುಗಳನ್ನು ರಭಸದಿಂದ ಬ್ರಷ್ ಮಾಡುವುದು ಅವುಗಳ ಸವೆತಕ್ಕೆ ಕಾರಣವಾಗುತ್ತದೆ,ಹೀಗಾಗಿ ಸಾಮಾನ್ಯ ವೇಗದಲ್ಲಿಯೇ ಹಲ್ಲುಜ್ಜಿಕೊಳ್ಳುವಂತೆ ವೈದ್ಯರು ಸೂಚಿಸುತ್ತಾರೆ. ಹಲ್ಲುಗಳನ್ನು ಗಟ್ಟಿಯಾಗಿ ಉಜ್ಜಿಕೊಳ್ಳುವುದರಿಂದ ಅವು ತಕ್ಷಣ ಬಿಳಿಯಾಗುತ್ತವೆ ಎಂದು ಹೆಚ್ಚಿನವರು ಭಾವಿಸುತ್ತಾರೆ,ಆದರೆ ಇದು ನಿಜವಲ್ಲ. ಬಲ ಪ್ರಯೋಗಕ್ಕಿಂತ ಸೂಕ್ತ ಹಲ್ಲುಜ್ಜುವ ಪದ್ಧತಿಯನ್ನು ಅನುಸರಿಸಬೇಕು.

►ವಸಡುಗಳಲ್ಲಿ ರಕ್ತಸ್ರಾವವಿದ್ದರೆ ಹಲ್ಲುಗಳನ್ನು ಉಜ್ಜಬಾರದು

 -ವಸಡುಗಳಿಂದ ರಕ್ತಸ್ರಾವವು ಬಾಯಿಯ ಸಮಸ್ಯೆಯಾಗಿದೆ ಮತ್ತು ಇದು ವಸಡುಗಳಲ್ಲಿ ಸೋಂಕನ್ನು ಸೂಚಿಸುತ್ತದೆ. ಇದನ್ನು ಜಿಂಜಿವೈಟಿಸ್ ಎಂದು ಕರೆಯಲಾಗುತ್ತದೆ. ಹಲ್ಲುಗಳನ್ನು ಬ್ರಷ್ ಮಾಡುವುದು ಯಾವುದೇ ರೀತಿಯಲ್ಲಿಯೂ ಬಾಯಿಯ ಆರೋಗ್ಯದ ಮೇಲೆ ಪರಿಣಾಮವನ್ನು ಬೀರುವುದಿಲ್ಲ. ಬದಲಿಗೆ ಬಾಯಿಯಲ್ಲಿನ ಎಲ್ಲ ಹಾನಿಕಾರಕ ಬ್ಯಾಕ್ಟೀರಿಯಾಗಳನ್ನು ನಿವಾರಿಸಲು ನೆರವಾಗುತ್ತದೆ.

►ಮೇಲ್ದವಡೆಯಲ್ಲಿನ ಹಲ್ಲನ್ನು ಕೀಳಿಸಿದರೆ ದೃಷ್ಟಿಗೆ ತೊಂದರೆಯಾಗುತ್ತದೆ

-ಇದಂತೂ ಶುದ್ಧ ಸುಳ್ಳು. ನಮ್ಮ ಕಣ್ಣುಗಳು ಹಲ್ಲುಗಳೊಂದಿಗೆ ಯಾವುದೇ ಸಂಪರ್ಕವನ್ನು ಹೊಂದಿಲ್ಲ. ಆಪ್ಟಿಕ್ ನರಗಳು ನಮ್ಮ ದೃಷ್ಟಿಯ ಹೊಣೆ ಹೊತ್ತಿರುತ್ತವೆ ಮತ್ತು ಇವು ಮೇಲ್ದವಡೆಯೊಂದಿಗೆ ಸಂಪರ್ಕ ಹೊಂದಿಲ್ಲ. ಹಲ್ಲುಗಳನ್ನು ಕೀಳಿಸುವುದರಿಂದ ದೃಷ್ಟಿಯ ಮೇಲೆ ಯಾವುದೇ ಪರಿಣಾಮ ಉಂಟಾಗುವುದಿಲ್ಲ.

►ಬುದ್ಧಿ ಹಲ್ಲನ್ನು ಕಿತ್ತರೆ ಮಿದುಳಿನ ಆರೋಗ್ಯದ ಮೇಲೆ ಪರಿಣಾಮ ಉಂಟಾಗುತ್ತದೆ

-ಯಾವುದೇ ಬುದ್ಧಿ ಹಲ್ಲಿಗೂ ಮತ್ತು ಮನಸ್ಸು ಅಥವಾ ಮಿದುಳಿನ ಆರೋಗ್ಯಕ್ಕೂ ಯಾವುದೇ ಸಂಬಂಧವಿಲ್ಲ. ಹೆಚ್ಚಾಗಿ 18ರಿಂದ 26 ವರ್ಷ ವಯೋಗುಂಪಿನವರಲ್ಲಿ ಯಾವುದೇ ಸಮಯಕ್ಕೂ ಈ ದವಡೆಹಲ್ಲು ಅಥವಾ ಕಡೆಹಲ್ಲು ಹುಟ್ಟಿಕೊಳ್ಳುತ್ತದೆ. ವಾಸ್ತವದಲ್ಲಿ ಇದು ಬುದ್ಧಿಶಕ್ತಿಯೊಂದಿಗೆ ಗುರುತಿಸಿಕೊಂಡಿದೆ.

►ಶಿಶುಗಳಲ್ಲಿ ಬಾಯಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕಿಲ್ಲ

 -ಶಿಶುಗಳಿಗೆ ಇನ್ನೂ ಹಲ್ಲುಗಳು ಮೂಡಿರುವುದಿಲ್ಲ ನಿಜ,ಆದರೆ ಅವುಗಳಿಗೆ ಬಾಯಿಯ ಆರೋಗ್ಯದ ಅಗತ್ಯವಿಲ್ಲ ಎಂದರ್ಥವಲ್ಲ. ಶಿಶುಗಳ ನಾಜೂಕಾದ ಬಾಯಿಯನ್ನು ಸ್ವಚ್ಛಗೊಳಿಸುವ ಕೆಲಸ ನಾಜೂಕಿನದ್ದಾಗಿದ್ದು,ಅವುಗಳ ಬಾಯಿಯ ಆರೋಗ್ಯ ಮುಖ್ಯವಾಗಿದೆ. ಕೆಲವೊಮ್ಮೆ ಶಿಶುಗಳು ಕುಡಿದ ಹಾಲಿನ ಅವಶೇಷಗಳು ಬಾಯಿಯಲ್ಲಿ ಉಳಿದುಕೊಳ್ಳುತ್ತವೆ ಮತ್ತು ಇವುಗಳಿಂದಾಗಿ ಬ್ಯಾಕ್ಟೀರಿಯಾಗಳು ಸೃಷ್ಟಿಯಾಗಿ ದಂತಕುಳಿಗಳಿಗೆ ಕಾರಣವಾಗುತ್ತವೆ.

►ಬ್ರೇಸ್‌ಗಳು ನೋವನ್ನುಂಟು ಮಾಡುತ್ತವೆ

-ಹಲ್ಲುಗಳು ಅಡ್ಡಾದಿಡ್ಡಿಯಾಗಿದ್ದರೆ,ಉಬ್ಬುಗಳಿಂದ ಕೂಡಿದ್ದರೆ ಅವುಗಳನ್ನು ಸರಿಪಡಿಸಲು ಬ್ರೇಸ್ ಅಥವಾ ಕಟ್ಟುಪಟ್ಟಿಗಳನ್ನು ಬಳಸಲಾಗುತ್ತದೆ. ಇವು ಬಾಯಿಯ ಆರೋಗ್ಯಕ್ಕೆ ಸುರಕ್ಷಿತವಾದ ವಸ್ತುವಿನಂದ ಮಾಡಲ್ಪಟ್ಟಿರುವುದರಿಂದ ಹಲ್ಲುಗಳಿಗೆ ಯಾವುದೇ ಹಾನಿಯನ್ನು ಮಾಡುವುದಿಲ್ಲ. ಬ್ರೇಸ್ ಅಳವಡಿಕೆಯ ಇಡೀ ಪ್ರಕ್ರಿಯೆ ನೋವುರಹಿತವಾಗಿರುತ್ತದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X