ಮಂಗಳೂರು: ಗರ್ಭಿಣಿ ಸಿಬ್ಬಂದಿಗೆ ಪೊಲೀಸರಿಂದ ಸೀಮಂತ

ಮಂಗಳೂರು, ಅ.16: ಗರ್ಭಿಣಿ ಸಿಬ್ಬಂದಿಗೆ ಮಂಗಳೂರು ಪೂರ್ವ (ಕದ್ರಿ) ಪೊಲೀಸ್ ಠಾಣೆಯಲ್ಲಿ ಸೀಮಂತ ಕಾರ್ಯಕ್ರಮ ನಡೆಯಿತು.
ಕದ್ರಿ ಠಾಣಾ ಸಿಬ್ಬಂದಿ ಗೌರಮ್ಮ ಅವರನ್ನು ನಗರದ ಬೆಂದೂರ್‌ನ ಸಂತ ಸೆಬಾಸ್ಟಿಯನ್ ಸಭಾಂಗಣದಲ್ಲಿ ಪೊಲೀಸ್ ನಿರೀಕ್ಷಕ ಶಾಂತಾರಾಮ್ ಮತ್ತು ಠಾಣಾ ಸಿಬ್ಬಂದಿ ವತಿಯಿಂದ ಸೀಮಂತ ನಡೆಸಿಕೊಡಲಾಯಿತು.
ಕಾರ್ಯಕ್ರಮದಲ್ಲಿ ಗೌರಮ್ಮ ಅವರ ಪತಿ ಶಿವಾನಂದ ಹಾಗೂ ಕುಟುಂಬಸ್ಥರು ಭಾಗವಹಿಸಿದ್ದರು.

Next Story





