ಭಾರತ ಮಹಿಳಾ ತಂಡ ಚಾಂಪಿಯನ್
ಸ್ಯಾಫ್ ಅಂಡರ್-15 ಚಾಂಪಿಯನ್ಶಿಪ್
ಥಿಂಪು, ಅ.16: ಪೆನಾಲ್ಟಿ ಶೂಟೌಟ್ ಮೂಲಕ ಬಾಂಗ್ಲಾದೇಶವನ್ನು 5-3 ಗೋಲುಗಳ ಅಂತರದಿಂದ ಮಣಿಸಿದ ಭಾರತ ಸ್ಯಾಫ್ ಅಂಡರ್-15 ಮಹಿಳಾ ಚಾಂಪಿಯನ್ಶಿಪ್ನಲ್ಲಿ ಜಯಶಾಲಿಯಾಗಿದೆ.
ಉಭಯ ತಂಡಗಳ ನಡುವೆ ನಿಗದಿತ ಅವಧಿಯ ಪಂದ್ಯ ಗೋಲುರಹಿತವಾಗಿ ಡ್ರಾಗೊಂಡಾಗ ಪೆನಾಲ್ಟಿ ಕಾರ್ನರ್ ಮೊರೆ ಹೋಗಲಾಯಿತು. ಆರಂಭದಲ್ಲೆ ಉತ್ತಮ ಆರಂಭ ಪಡೆಯುವ ಉದ್ದೇಶದಿಂದ ಪ್ರಿಯಾಂಕಾ ಸುಜೀಶ್ ದಾಳಿ ನಡೆಸಿದರು. ಇದಕ್ಕೆ ಪ್ರತಿಯಾಗಿ ಬಾಂಗ್ಲಾದೇಶ ಕೂಡ ಭಾರತಕ್ಕೆ ಎದಿರೇಟು ನೀಡಿತು. ಅನಿಶಾ ಬಕ್ ಲಾ ಹಾಗೂ ಲಿಂಡಾ ಕೊಮ್ ಸೆರ್ಟೊ ಹಲವು ಅವಕಾಶವನ್ನು ಸೃಷ್ಟಿಸಿದರೂ ಬಾಂಗ್ಲಾದೇಶ ಎಲ್ಲವನ್ನೂ ವಿಫಲಗೊಳಿಸಿತು.
ಬಾಂಗ್ಲಾದೇಶದ ಗೋಲ್ಕೀಪರ್ ರುಪ್ನಾ ಚಾಕ್ಮಾ ಗಟ್ಟಿಯಾಗಿ ನಿಂತು ಭಾರತಕ್ಕೆ ಗೋಲು ನಿರಾಕರಿಸಿದರು. ಹೀಗಾಗಿ ನಿಗದಿತ ಸಮಯದಲ್ಲಿ ಉಭಯ ತಂಡಗಳು ಗೋಲು ಗಳಿಸಲು ವಿಫಲವಾದವು.
ಪೆನಾಲ್ಟಿ ಕಾರ್ನರ್ನಲ್ಲಿ ಭಾರತದ ನಾಯಕಿ ಶಿಲ್ಕಿ ದೇವಿ ಕೊನೆಯ ಸ್ಪಾಟ್-ಕಿಕ್ ಮೂಲಕ ಭಾರತಕ್ಕೆ 5-3 ಅಂತರದ ಗೆಲುವು ತಂದರು.
Next Story